ಚಿತ್ರದುರ್ಗ, ಅಕ್ಟೋಬರ್,10,2026 (www.justkannada.in): ಸ್ಟಿಂಗ್ ಅಪರೇಷನ್ ಕುರಿತು ಸಚಿವರಿಗೆ ಎಚ್ಚರಿಕೆ ನೀಡಿದ ವಿಚಾರ ಸಂಬಂಧ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಸಿಎಂ ಡಿಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾರು ಸ್ಟಿಂಗ್ ಮಾಡ್ತಾರೆ ಪಟ್ಟಿಕೊಡಿ. ಯಾರು ಯಾರ ವಿರುದ್ದ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ. ಸ್ಟಿಂಗ್ ಅಪರೇಷನ್ ಗೆ ಸಿಕ್ಕಿ ಹಾಕಿಕೊಂಡವರ ಪಟ್ಟಿ ನೀಡಿ ಎಂದು ಆಗ್ರಹಿಸಿದರು.
ಸ್ಟಿಂಗ್ ಅಪರೇಷನ್ ಪಿತಾಮಹನೇ ರಾಜ್ಯದ ಸಿಎಂ ಎಂದು ಜನ ಹೇಳುತ್ತಾರೆ ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಜನರ ಗಮನವನ್ನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.






