Wednesday, October 7, 2026

BDA Apartments

Just Kannada BDA JK_Adv BDA Adv
Home Front Page ‘ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ? ಎಚ್ಚರಿಕೆಯಿಂದಿರುವ ಸಿಎಂ ಡಿಕೆಶಿ ಸೂಚನೆ

‘ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ? ಎಚ್ಚರಿಕೆಯಿಂದಿರುವ ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಅಕ್ಟೋಬರ್,7,2026 (www.justkannada.in): ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ ‘ಸ್ಟಿಂಗ್ ಆಪರೇಷನ್’ ನಡೆಸಲಾಗುತ್ತಿದೆ ಸಚಿವರೆಲ್ಲರೂ ಎಚ್ಚರಿಕೆಯಿಂದಿರುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.  ಯಾರ ಯಾರ ಮೇಲೆ ಈಗಾಗಲೇ ಈ ಖಾಸಗಿ ಆಪರೇಷನ್ ನಡೆಯುತ್ತಿದೆ ಎಂಬ ಸಚಿವರ ಹೆಸರುಗಳ ಪಟ್ಟಿಯನ್ನೂ  ಸಿಎಂ ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ  ತಿಳಿಸುವ ಮೂಲಕ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.Sting operation dks1

ಸರ್ಕಾರದ ಹೆಸರಿಗೆ ಮಸಿಬಳಿಯಲು ವಿಪಕ್ಷಗಳು ಖಾಸಗಿ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿವೆ. ನೀವು ಎಲ್ಲೆಲ್ಲಿ ಓಡಾಡುತ್ತಿದ್ದೀರಾ, ಯಾರನ್ನು ಭೇಟಿಯಾಗುತ್ತಿದ್ದೀರಾ ಎನ್ನುವುದರ ಬಗ್ಗೆ ಪ್ರತಿದಿನ ನಿಗಾ ಇಡಲಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ಸಚಿವರೂ ತಮ್ಮ ಭೇಟಿ ಮತ್ತು ಸಂಭಾಷಣೆಗಳ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು  ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.Sting operation jk02_new jk02 new

Key words: Sting operation, ministers,  CM, DK Shivakumar, advise, caution.

English Summary
Title

Karnataka Sting Operation Alert: CM DK Shivakumar Warns Ministers to Stay Vigilant Against Political Traps

Short Description
Karnataka Chief Minister DK Shivakumar has issued a strict advisory to his cabinet ministers, warning them of potential political sting operations orchestrated by opposition-backed private agencies. During a recent cabinet meeting, Shivakumar revealed intelligence reports indicating that investigative teams are actively tracking ministers to trap them in compromising situations. He urged all ministers to maintain absolute vigilance, exercise extreme caution in daily official dealings, and protect their public image. This high-alert warning follows rising political friction in Karnataka, with the ruling Congress government bracing for targeted exposure attempts and central agency scrutiny.
Keywords
Sting operation, ministers, CM, DK Shivakumar, advise, caution.