Friday, October 2, 2026

BDA Apartments

Home Front Page ಅ. 4 ರಂದು ಚೀ. ಜ.ರಾಜೀವ ಅವರ ‘ಪ್ರಿಯ ಗಾಂಧಿ’ ಕೃತಿ ಕುರಿತು ಸಂವಾದ

ಅ. 4 ರಂದು ಚೀ. ಜ.ರಾಜೀವ ಅವರ ‘ಪ್ರಿಯ ಗಾಂಧಿ’ ಕೃತಿ ಕುರಿತು ಸಂವಾದ

ಮೈಸೂರು.ಅಕ್ಟೋಬರ್‌,2,2026 (www.justkannada.in):  ಗಾಂಧಿ ಸ್ಮರಣೆಯ ವಿಶೇಷ ನೆಪದಲ್ಲಿ, ಹಿರಿಯ ಪತ್ರಕರ್ತ ಚೀ. ಜ. ರಾಜೀವ ಅವರ ಅಂಕಣದ ಲೇಖನಗಳ ಪುಸ್ತಕ ‘ಪ್ರಿಯ ಗಾಂಧಿ’ ಕೃತಿಯ ಕುರಿತು ಅರ್ಥಪೂರ್ಣ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’ (IIET) ಹಾಗೂ ‘ರಂಗವಲ್ಲಿ’ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ  ಕಾರ್ಯಕ್ರಮವು  ಅಕ್ಟೋಬರ್ 4, ಭಾನುವಾರದಂದು ಬೆಳಿಗ್ಗೆ 11:00 ಗಂಟೆಗೆ ಹಾರ್ಡ್ವಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ  ನಡೆಯಲಿದೆ. ಈ ಸಂವಾದ ಕಾರ್ಯಕ್ರಮವನ್ನು ಸಂವಹನ ತಜ್ಞರು ಹಾಗೂ ಅಂಕಣಕಾರ  ಎನ್. ರವಿ ಶಂಕರ್ ಅವರು ನಡೆಸಿಕೊಡಲಿದ್ದಾರೆ.

ಸಂವಾದದಲ್ಲಿ ಭಾಗವಹಿಸುವ ಪ್ರಮುಖರು:

* ಡಾ. ಎಸ್. ರಂಗನಾಥಯ್ಯ (ವೈದ್ಯರು)

* ಪ್ರೊ. ಎನ್. ಉಷಾರಾಣಿ (ಪ್ರಾಧ್ಯಾಪಕರು)

* ಜಿ. ಎನ್. ಮೋಹನ್ (ಹಿರಿಯ ಪತ್ರಕರ್ತರು)

* ವಾದಿರಾಜ್ (ಸಾಮಾಜಿಕ ಚಿಂತಕರು)

* ಡಾ. ಈ. ಸಿ. ನಿಂಗರಾಜೇಗೌಡ (ರಾಜಕೀಯ ಮುಖಂಡರು)

* ಅಬ್ದುಲ್ ಕರೀಂ (ಹವ್ಯಾಸಿ ರಂಗಕರ್ಮಿ)

* ನಿಂಗರಾಜ್ ಚಿತ್ತಣ್ಣನವರ್ (ಪ್ರಕಾಶಕರು)

* ಕೊಳ್ಳೇಗಾಲ ಮಹೇಶ್ (ಸಂಪಾದಕರು, ಜಸ್ಟ್ ಕನ್ನಡ)

* ಚೀ. ಜ. ರಾಜೀವ (ಕೃತಿಯ ಲೇಖಕರು)

ಭಾಗವಹಿಸಲಿದ್ದಾರೆ.

 ‘ಪ್ರಿಯ ಗಾಂಧಿ’ ಕೃತಿಯ ಬಗ್ಗೆ:

‘ಬಹುರೂಪಿ’ ಪ್ರಕಾಶನ ಸಂಸ್ಥೆಯು ಹೊರತಂದಿರುವ ‘ಪ್ರಿಯ ಗಾಂಧಿ’ ಕೃತಿಯು ಲೇಖಕ ಚೀ. ಜ. ರಾಜೀವ ಅವರು ಬರೆದಿರುವ ಮೌಲ್ಯಯುತ ಅಂಕಣಗಳ (ಮಹಾತ್ಮನಿಗೆ ಪತ್ರ) ಸಂಕಲನವಾಗಿದೆ. 2025ರ ಗಾಂಧಿ ಜಯಂತಿಯಂದು ಈ ಪುಸ್ತಕವು ಓದುಗರ ಕೈಸೇರಿತ್ತು.Mysore priyagandhi

ಇಂದಿನ ಅವಸರದ ಕಾಲದಲ್ಲಿ ಜಾತಿಗಣತಿ, ಮೀಸಲಾತಿ, ಪ್ರಾತಿನಿಧ್ಯ ಮತ್ತು ಸಾಮಾಜಿಕ ಸಮಾನತೆಯಂತಹ ಗಂಭೀರ ವಿಷಯಗಳನ್ನು ಅತ್ಯಂತ ನೈಜವಾಗಿ ಹಾಗೂ ವೈಚಾರಿಕ ದೃಷ್ಟಿಕೋನದಿಂದ ಈ ಬರಹಗಳಲ್ಲಿ ಚರ್ಚಿಸಲಾಗಿದೆ. ಲೇಖಕರ ಸಮಾಜಮುಖಿ ಚಿಂತನೆಗಳು, ಬಡವರ ಮತ್ತು ಅಸಹಾಯಕರ ಪರವಾದ ದನಿ ಹಾಗೂ ಕಾಲಾತೀತವಾದ ಪ್ರಬುದ್ಧ ವಿಚಾರಗಳು ಓದುಗರಲ್ಲಿ ಜಾಗೃತಿ ಮೂಡಿಸುವಂತಿವೆ.Mysore priayagandhi

ಸಾಹಿತ್ಯಾಸಕ್ತರು, ಓದುಗರು ಹಾಗೂ ಚಿಂತಕರು ಈ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448771815 ಸಂಖ್ಯೆಯನ್ನು ಸಂಪರ್ಕಿಸಬಹುದು.Discussion jk02

Mysore, Discussion, Chee. Ja. Rajeev’s,  work, Priya Gandhi, October 4.

English Summary
Title

Discover Chee. Ja. Rajeev’s Book "Priya Gandhi" at a Special Literary Event in Mysore on October 4.

Short Description
Join fellow literature enthusiasts in Mysore on Sunday, October 4, for an engaging book discussion on Priya Gandhi, the latest work by veteran journalist Chee. Ja. Rajeev. Published by Bahuroopi, this 240-page Kannada book features a rich collection of insightful column articles. Organized as a meaningful tribute to Mahatma Gandhi, the interactive dialogue will delve deep into the book's core themes, offering unique cultural and social perspectives. Don't miss this opportunity to connect with local literary voices and explore contemporary Kannada journalism.
Keywords
Mysore, Discussion, Chee. Ja. Rajeev's, work, Priya Gandhi, October 4.