Friday, September 25, 2026

BDA Apartments

Mysore Dasara BDA JK_Adv BDA Adv
Home Front Page ದಸರಾ ದೀಪಾಲಂಕಾರ ಹೆಚ್ಚು ಆಕರ್ಷಕ, ಹೊಸತನದಿಂದ ಕೂಡಿರಲಿ -ಸಚಿವ ಕೆ.ಜೆ.ಜಾರ್ಜ್

ದಸರಾ ದೀಪಾಲಂಕಾರ ಹೆಚ್ಚು ಆಕರ್ಷಕ, ಹೊಸತನದಿಂದ ಕೂಡಿರಲಿ -ಸಚಿವ ಕೆ.ಜೆ.ಜಾರ್ಜ್

ಮೈಸೂರು, ಸೆಪ್ಟಂಬರ್‌,25, 2026 (wwww.justkannada.in) ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮಾಡಲಾಗುವ ದೀಪಾಲಂಕಾರ ಕಳೆದ ಬಾರಿಗಿಂತಲೂ ಹೆಚ್ಚು ಆಕರ್ಷಕ ಹಾಗೂ ಹೊಸತನದಿಂದ ಕೂಡಿರಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರಿನ ಕಡಕೊಳದಲ್ಲಿರುವ ಕರ್ನಾಟಕ ಇಂಜಿನಿಯರ್ಸ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ 2026ನೇ ಸಾಲಿನ ದಸರಾ ಆಚರಣೆಯ ವಿವಿಧ ಕಾರ್ಯಕ್ರಮಗಳ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಜೆ ಜಾರ್ಜ್ ಅವರು ಮಾತನಾಡಿದರು.

“ಕಳೆದ ಬಾರಿ ದಸರಾ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತಲೂ ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ದೀಪಾಲಂಕಾರ ರೂಪಿಸಬೇಕು. ದಸರಾಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ದೀಪಾಲಂಕಾರ ಇರಬೇಕು,” ಎಂದು ಹೇಳಿದರು.

“ದಸರಾ ಅವಧಿಯಲ್ಲಿ ದೀಪಾಲಂಕಾರದಿಂದಾಗಿ ವಿದ್ಯುತ್ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆವಹಿಸಿ ಸಮರ್ಪಕ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಈವರೆಗೆ ದೀಪಾಲಂಕಾರಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಈ ಬಾರಿಯೂ ಯಾವುದೇ ತೊಂದರೆಯಾಗದಂತೆ ನಿರಂತರ ನಿಗಾ ವಹಿಸಬೇಕು,” ಎಂದು ಅಧಿಕಾರಿಗಳಿಗೆ ಸೂಚಿಸಿದರು.Mysore Dasara kj geogre

ಇದಕ್ಕೂ ಮುನ್ನ ಸಭೆಯ ಆರಂಭದಲ್ಲಿ ಸೆಸ್ಕ್ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಅವರು ದಸರಾ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿರುವ ದೀಪಾಲಂಕಾರ, ವಿವಿಧ ರಸ್ತೆಗಳು ಹಾಗೂ ವೃತ್ತಗಳಲ್ಲಿ ನಿರ್ಮಿಸಲಾಗುತ್ತಿರುವ ಕಲಾಕೃತಿಗಳು ಮತ್ತು ಡ್ರೋನ್ ಪ್ರದರ್ಶನದಲ್ಲಿ ಮಾಡುತ್ತಿರುವ ಕಲಾಕೃತಿಗಳ ಕುರಿತು ಮಾಹಿತಿ ನೀಡಿದರು.

ಯೋಜನೆಗಳ ಪ್ರಗತಿಗೆ ವೇಗ ನೀಡಿ

ಇದೇ ವೇಳೆ ಕುಸುಮ್-ಸಿ ಹಾಗೂ ಕುಸುಮ್-ಬಿ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಕೆ.ಜೆ.ಜಾರ್ಜ್ ಅವರು, “ನಿಗದಿತ ಗುರಿ ಹಾಗೂ ಪ್ರಗತಿ ಸಾಧಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಂತೆಯೇ ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು,” ಎಂದು ಹೇಳಿದರು.Illumination with lights dasara

“ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಬಹುತೇಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮೊದಲು ಜನಪ್ರತಿನಿಧಿಗಳ ಗಮನಕ್ಕೆ ತರುತ್ತಾರೆ. ಹೀಗಾಗಿ ಜನಪ್ರತಿನಿಧಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು,” ಎಂದು ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.

ಸಭೆಯಲ್ಲಿ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನಾ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಾ. ಸಂತೃಪ್ತ್ ಸೇರಿದಂತೆ ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.attractive jk02

400 ಕೆವಿ ಉಪ ಕೇಂದ್ರ ಪರಿಶೀಲನೆ

ಇದಕ್ಕೂ ಮುನ್ನ ಕಡಕೋಳದಲ್ಲಿ ಕೆಪಿಟಿಸಿಎಲ್‌ ವತಿಯಿಂದ ನಿರ್ಮಿಸುತ್ತಿರುವ 400 ಕೆವಿ ಉಪ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಕೆ.ಜೆ. ಜಾರ್ಜ್ ಅವರು, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.‌

 

 

 

 

English Summary
Title

Experience Mysuru Dasara: Innovative City Illumination by Minister K.J. George

Short Description
Experience the magic of the Mysuru Dasara festival as the heritage city transforms into a glowing wonderland. Spearheaded by Energy Minister K.J. George, this year’s Mysuru Dasara illumination features innovative lighting spanning over 130 km of roads. Blending cultural heritage with modern technology, the Chamundeshwari Electricity Supply Corporation (CESC) utilizes energy-efficient LED models, smart mini-lights, and dazzling laser systems. Highlights include the iconic Hasiru Chappara (Green Canopy) on Sayyaji Rao Road and a record-breaking drone show at Bannimantap Ground. Celebrate spectacular eco-friendly artistry in Karnataka.
Keywords
Mysore Dasara, Illumination with lights, attractive, innovative, Minister K.J. George