Wednesday, September 23, 2026

BDA Apartments

Home Front Page ಹೂಡಿಕೆ ಆಕರ್ಷಣೆಗೆ ಸಚಿವ ಎಂ‌ ಬಿ ಪಾಟೀಲ ಸಿಂಗಪುರ್ ಪ್ರವಾಸ

ಹೂಡಿಕೆ ಆಕರ್ಷಣೆಗೆ ಸಚಿವ ಎಂ‌ ಬಿ ಪಾಟೀಲ ಸಿಂಗಪುರ್ ಪ್ರವಾಸ

 

ಬೆಂಗಳೂರು, SEP.23,2026: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಸಿಂಗಪುರಕ್ಕೆ ಭೇಟಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ, ಬುಧವಾರದಂದು ‘ಸಿಂಗಪುರ್ ಸೆಮಿಕಂಡಕ್ಟರ್ ಕೈಗಾರಿಕಾ ಒಕ್ಕೂಟ’ (ಎಸ್ಎಸ್ಐಎ) ಮತ್ತು ಸಿಂಗಪುರ್ ಬಿಝಿನೆಸ್ ಫೆಡರೇಷನ್‌ ನ (ಎಸ್ ಬಿ ಎಫ್) ಉನ್ನತ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದಾರೆ.

ಉನ್ನತ ಮಟ್ಟದ ನಿಯೋಗದೊಂದಿಗೆ ಎರಡು ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಸಚಿವರು ಗುರುವಾರ ಮತ್ತು ಶುಕ್ರವಾರ ಹತ್ತಾರು ಕಂಪನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಸಿಂಗಪುರದಿಂದ ಮಾಹಿತಿ ನೀಡಿರುವ ಅವರು, ಸಿಂಗಪುರ್ ಬಿಝಿನೆಸ್ ಫೆಡರೇಷನ್ 34 ಸಾವಿರ ಕಂಪನಿಗಳ ಒಕ್ಕೂಟವಾಗಿದೆ. ಇತ್ತೀಚೆಗೆ ಅದು ಆಗ್ನೇಯ ಏಷ್ಯಾದ ಆಚೆಗೆ ಬೆಂಗಳೂರಿನಲ್ಲಿ ತನ್ನ ‘ಸಿಂಗಪುರ್ ಎಂಟರ್ಪ್ರೈಸ್ ಸೆಂಟರ್’ ತೆರೆದಿದ್ದು, ಇದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಿದೆ ಎಂದಿದ್ದಾರೆ.

ಈ‌ ಒಕ್ಕೂಟವು ವಾಣಿಜ್ಯ ವಹಿವಾಟುಗಳ ಅಂತಾರಾಷ್ಟ್ರೀಕರಣ ಮತ್ತು ವಿದೇಶೀ ಸಹಭಾಗಿತ್ವವನ್ನು ಹೆಚ್ಚಾಗಿ ಉತ್ತೇಜಿಸುತ್ತ ಬಂದಿದೆ. ಭಾರತದಲ್ಲಿ ಹೂಡಿಕೆ ಮಾಡುವ ಸಿಂಗಪುರದ ಕಂಪನಿಗಳಿಗೆ ಬೆಂಗಳೂರಿನಲ್ಲಿ ಆರಂಭವಾಗಿರುವ ಕೇಂದ್ರವು ನೆರವು ನೀಡುತ್ತದೆ. ಸಿಂಗಪುರದ ಕಂಪನಿಗಳು ಮತ್ತು ಕರ್ನಾಟಕ ರಾಜ್ಯದ ನಡುವೆ ಹೆಚ್ಚಿನ ವಾಣಿಜ್ಯ ವಹಿವಾಟು ಮತ್ತು ಅಧಿಕ ಹೂಡಿಕೆ ಆಗಬೇಕಾಗಿರುವ ಕುರಿತು ಮಾತುಕತೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಸೆಮಿಕಂಡಕ್ಟರ್ ಕಂಪನಿಗಳ‌ ಒಕ್ಕೂಟದೊಂದಿಗೆ ಕೂಡ ರಾಜ್ಯದ ಈ ವಲಯದಲ್ಲಿ ‌ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಕುರಿತು ವಿಚಾರ ವಿನಿಮಯ ಮಾಡಲಾಯಿತು. ಇದರಲ್ಲಿ ಮಾನವ ಸಂಪನ್ಮೂಲ ಸಹಭಾಗಿತ್ವ, ಬೆಂಗಳೂರಿನ ವಿವಿಧ ವಿಶ್ವವಿದ್ಯಾಲಯಗಳಿಂದ ಸಿಂಗಪುರಕ್ಕೆ ಉನ್ನತ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳ‌ ಹೆಚ್ಚಳ‌ ಮತ್ತು ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗ ಮುಂತಾದ ವಿಚಾರಗಳು ಪ್ರಧಾನವಾಗಿ ಚರ್ಚಿತವಾದವು ಎಂದು ಪಾಟೀಲ ವಿವರಿಸಿದ್ದಾರೆ.

Karnataka industrial investment PATIL

ಲ್ಯಾಮ್ ರೀಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಗಳು ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆಂದು ಬೃಹತ್ ಬಂಡವಾಳ ಹೂಡುತ್ತಿರುವುದನ್ನು ಒಕ್ಕೂಟದ ಗಮನಕ್ಕೆ ತರಲಾಯಿತು. ಜತೆಗೆ ಎರಡೂ ಸಂಘಟನೆಗಳನ್ನು ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ‌ ಸಮಾವೇಶಕ್ಕೆ ಆಹ್ವಾನಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ಎಸ್.ಬಿ.ಎಫ್- ಇಂಡಿಯಾ ಬಿಜಿನೆಸ್ ಕೌನ್ಸಿಲ್ ಮುಖ್ಯಸ್ಥ ಪ್ರಸೂನ್ ಮುಖರ್ಜಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸಮಂತ ಟಿಯೋ, ಎಸ್ಎಸ್ಐಎ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಆ್ಯಂಗ್ ವೀ ಸೆಂಗ್ ಭಾಗವಹಿಸಿದ್ದರು.

ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಇದ್ದಾರೆ.

KEY WORDS:

    • Karnataka industrial investment
    • M.B. Patil Singapore visit
    • Singapore Semiconductor Industry Association
    • Singapore Business Federation Bengaluru
    • Karnataka semiconductor sector

English Summary
Title

Karnataka Minister M.B. Patil Woos Singapore Semiconductor and Business Giants for Industrial Investment

Short Description
Karnataka Industrial Minister M.B. Patil met with top representatives from the Singapore Semiconductor Industry Association (SSIA) and the Singapore Business Federation (SBF) to attract foreign investment. Leading a high-level delegation on a two-day official visit, the minister is scheduled to hold talks with dozens of companies. Minister Patil highlighted that the SBF, a massive network of 34,000 companies, recently launched its Singapore Enterprise Center in Bengaluru. This expansion beyond Southeast Asia has received full cooperation from the state government, paving the way for stronger global trade and industrial growth.
Keywords
Karnataka industrial investment, M.B. Patil, Singapore visit, Singapore Semiconductor Industry Association, Singapore Business Federation, Bengaluru, Karnataka, semiconductor sector