Tuesday, September 22, 2026

BDA Apartments

MYSORE: ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ತೆರುವು BDA JK_Adv BDA Adv
Home Front Page  ಕೆಪಿಎಸ್‌ ಸಿ ಮುಚ್ಚುವ ಬಗ್ಗೆ ಚಿಂತನೆ ನಡೆಸಿದ್ದೇವೆ- ಸಿಎಂ ಡಿಕೆ ಶಿವಕುಮಾರ್‌

 ಕೆಪಿಎಸ್‌ ಸಿ ಮುಚ್ಚುವ ಬಗ್ಗೆ ಚಿಂತನೆ ನಡೆಸಿದ್ದೇವೆ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಸೆಪ್ಟಂಬರ್,22,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಲ್ಲಿನ  ಅಕ್ರಮ ಕುರಿತು ಕಳವಳ ವ್ಯಕ್ತಪಡಿಸಿರುವ ಸಿಎಂ ಡಿಕೆ ಶಿವಕುಮಾರ್‌ , ಕೆಪಿಎಸ್‌ ಸಿ ಮುಚ್ಚುವ ಬಗ್ಗೆ ಕಾನೂನಾತ್ಮಕವಾಗಿ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಕೆಪಿಎಸ್‌ ಸಿ ಮೇಲೆ ನಂಬಿಕೆಯಿಂದ ನೇಮಕ ಮಾಡಿರುತ್ತೇವೆ ಪದೇ ಪದೆ ಅಕ್ರಮ ನಡೆದಾಗ ಮಕ್ಕಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತದೆ.  ಹೀಗಾಗಿ ಕೆಪಿಎಸ್ ಸಿ ಮುಚ್ಚುವ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದರು.thought kpsc

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಸಂಬಂಧ ಪೊಲೀಸ್ ತನಿಖೆ ಈಗಾಗಲೇ ನಡೆಯುತ್ತಿದೆ.  ಅಕ್ರಮದಲ್ಲಿ ಶಾಮೀಲಾದ ಹಲವರನ್ನು ಈಗಾಗಲೇ ಗುರುತಿಸಲಾಗಿದೆ. ಪ್ರಕರಣದ ತನಿಖೆಗೆ ಎಸ್ಐಟಿ ರಚನೆಗೆ ಆಕ್ಷೇಪವಿಲ್ಲ ಎಂದರು.thought jk02

ಹಿಂದೆ ವಿದ್ಯುತ್ ಸಚಿವರಾಗಿದ್ದಾಗ ಪಾರದರ್ಶಕ ನೇಮಕಾತಿ ನಡೆಸಿದ್ದನ್ನು ಅವರು ಸ್ಮರಿಸಿದರು. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದು  ಸಿಎಂ ಡಿಕೆ ಶಿವಕುಮಾರ್‌ ಭರವಸೆ ನೀಡಿದರು.

Key words:  thought, Closing, KPSC, CM DK Shivakumar

English Summary
Title

CM DK Shivakumar Hints at Closing Corrupt KPSC

Short Description
Karnataka Chief Minister DK Shivakumar announced that the state government is legally exploring the possibility of shutting down the Karnataka Public Service Commission (KPSC). The major decision follows decades of deep-rooted corruption allegations, recruitment scams, and fraudulent appointments. Highlighting that safeguarding the future of honest youth is the ultimate priority, Shivakumar stated that extensive evidence of internal operational misconduct has been gathered. He also questioned the High Court’s intervention in selecting Special Investigation Team (SIT) officers, asserting that such appointments fall strictly under executive powers.
Keywords
thought, Closing, KPSC, CM DK Shivakumar