Tuesday, September 15, 2026

BDA Apartments

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬಿಗ್ ಬಿ ಅಮಿತಾಬ್ ! BDA JK_Adv BDA...
Home Cinema ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬಿಗ್ ಬಿ ಅಮಿತಾಬ್ !

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬಿಗ್ ಬಿ ಅಮಿತಾಬ್ !

ಮುಂಬೈ, ನವೆಂಬರ್ 08, 2019 (www.justkannada.in): ಬಾಲಿವುಡ್ ಬಿಗ್ ಬಿ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ಮಾತನಾಡಿದ್ದಾರೆ.

ಇಷ್ಟು ವರ್ಷಗಳ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವೆ. ನನ್ನ ದೇಹ ಸಾಕಷ್ಟು ದಂಡನೆಗೊಳಗಾಗಿದೆ, ದಣಿದಿದೆ. ಹೀಗಾಗಿ ವೈದ್ಯರು ನನಗೆ ನಟನೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸುತ್ತಲೇ ಇದ್ದಾರೆ. ಹಾಗಿದ್ದರೂ ಸುಮ್ಮನೇ ಕೂರಲು ಮನಸ್ಸು ಬರುತ್ತಿಲ್ಲ ಎಂದು ಕಾವ್ಯಾತ್ಮಕವಾಗಿ ಬಿಗ್ ಬಿ ಬರೆದುಕೊಂಡಿದ್ದಾರೆ.

50 ವರ್ಷಗಳ ಸಾರ್ಥಕ ಸಿನಿಮಾ ಬದುಕು ಸವೆಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಬಿಗ್ ಬಿ ಆರೋಗ್ಯ ಮೊದಲಿನಂತಿಲ್ಲ. ಆಗಾಗ ಆಸ್ಪತ್ರೆಗೆ ಅಲೆದಾಡಬೇಕಾಗುತ್ತಿದೆ. ಇದರಿಂದಾಗಿ ವೈದ್ಯರೂ ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರಂತೆ. ನಟನೆ ಬಿಟ್ಟು ವಿಶ್ರಾಂತಿ ಪಡೆಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.