Sunday, October 18, 2026

Dasara Wishes

Happy Dasara
Home Crime ರೈಲು ಡಿಕ್ಕಿಯಾಗಿ  ವೃದ್ಧೆ, ಮೊಮ್ಮಕ್ಕಳು ದುರ್ಮರಣ

ರೈಲು ಡಿಕ್ಕಿಯಾಗಿ  ವೃದ್ಧೆ, ಮೊಮ್ಮಕ್ಕಳು ದುರ್ಮರಣ

ಬೆಂಗಳೂರು ಗ್ರಾಮಾಂತರ,ಆಗಸ್ಟ್,31,2026 (www.justkannada.in):  ರೈಲು ಡಿಕ್ಕಿಯಾಗಿ ವೃದ್ಧೆ ಮೊಮ್ಮಕ್ಕಳು ಸಾವನ್ನಲ್ಲಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ನಲ್ಲಿಈ ಘಟನೆ ನಡೆದಿದೆ.  ಇರ್ಫಾನ(46) ರುಕಿಯಾ(13) ರಾಕಿಯ(8) ಮೃತಪಟ್ಟವರು.   ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ  ಮೂವರು ಚೆಲ್ಲಾಪಿಲ್ಲಿಯಾಗಿದ್ದಾರೆ.ರೈಲು ಡಿಕ್ಕಿಯಾಗಿ ವೃದ್ಧೆ rail

ರಜೆ ಇದ್ದ ಕಾರಣ ಹಿಂದೂಪುರದಿಂದ ಅಜ್ಜಿಮನೆಗೆ ಮೊಮ್ಮಕ್ಕಳು ಬಂದಿದ್ದರು. ಮೊಮ್ಮಕ್ಕಳು ರಜೆ ಮುಗಿಸಿ ಊರಿಗೆ ಅಜ್ಜಿ ಜೊತೆ ಹೋಗುತ್ತಿದ್ದರು.  ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಶವಂತಪುರ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ರೈಲು ಡಿಕ್ಕಿಯಾಗಿ ವೃದ್ಧೆ jk02_new jk02 new

Key words: Elderly woman, grandchildren, die ,train, collision