ಬೆಂಗಳೂರು,ಆಗಸ್ಟ್,28,2026 (www.justkannada.in): ಕೆಪಿಎಸ್ ಸಿಯಲ್ಲಿ ಹಗರಣ ನಡೆದಿದೆ. ಸಾರ್ವಜನಿಕರಲ್ಲಿ ವಿಶ್ವಾಸವೇ ಇಲ್ಲ ನೇಮಕಾತಿ ಮಾಡುವಾಗ ರೇಟ್ ಫಿಕ್ಸ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಆಡು ಮುಟ್ಟದ ಸೊಪ್ಪಿಲ್ಲ ಖ್ಯಾತಿ ಪ್ರಿಯಾಂಕ್ ಖರ್ಗೆ ಕೃಪಾಪೋಷಿತ. ಜಾತಿ ಹೆಸರಲ್ಲಿ ದುಡ್ಡು ತೆಗೆದುಕೊಂಡು ಕೆಪಿಎಸ್ ಸಿ ಹಾಳಾಗಿದೆ. ಇಡಿ ರೇಡ್ ಆದಾಗ ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದರು. ಈ ಬಗ್ಗೆ ಗೊತ್ತಿಲ್ಲ ಎಂದರೆ ಯಾಕ್ರಿ ಗೃಹ ಸಚಿವರಾಗಿದ್ದೀರಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಪ್ರತಿದಿನ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಸಚಿವರ ರಾಜೀನಾಮೆ ವಿಚಾರ ಕೆಪಿಎಸ್ ಸಿ ಅಕ್ರಮ ಹಗರಣ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಧರಣಿ ವಿಚಾರ , ಪಾರ್ಕ್ ನ ಶೇ.5 ರಷ್ಟು ಜಾಗವನ್ನು ತೆಗೆದುಕೊಳ್ಳುವ ವಿಧೇಯಕ, ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ, ಬಿಸಿನೆಸ್ ಕಾರಿಡಾರ್ ಸೇರಿ ಹಲವು ಸಮಸ್ಯೆಗಳು ಇವೆ. ರಾಜ್ಯ ಸರ್ಕಾರದ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕೆಂದರೇ ಧಾರವಾಹಿ ರೀತಿಯಲ್ಲಿ ಚರ್ಚೆ ಮಾಡಬಹುದು ಎಂದರು.
Key words: Union Minister, HDK, KPSC, Minister Priyank kharge







