Tuesday, September 15, 2026

BDA Apartments

Home Front Page ಸಿದ್ದರಾಮಯ್ಯ ಸದನದಲ್ಲಿ ಭಾಗಿಯಾಗಿಲ್ಲ: ಸರ್ಕಾರದಲ್ಲಿ ಗೊಂದಲವಿದೆ-  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ ಸದನದಲ್ಲಿ ಭಾಗಿಯಾಗಿಲ್ಲ: ಸರ್ಕಾರದಲ್ಲಿ ಗೊಂದಲವಿದೆ-  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ಆಗಸ್ಟ್,28,2026 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ, ರಾಜಕೀಯ ಅಸ್ಥಿರತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸರ್ಕಾರದಲ್ಲಿ ಗೊಂದಲ ಇದೆ. ಆನೇಕ ಶಾಸಕರು ಸಿಟ್ಟಾಗಿದ್ದಾರೆ.  ಸಿದ್ದರಾಮಯ್ಯ ಸೇರಿ ಅನೇಕರು ಸದನದಲ್ಲಿ ಭಾಗಯಾಗಿಲ್ಲ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಆರಂಭವಾಗಿದೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯ ಸದನದಲ್ಲಿ ಭಾಗಿಯಾಗಿಲ್ಲ cm dks

ಸರ್ಕಾರದಿಂದ 101 ತಾಲ್ಲೂಕುಗಳನ್ನ ಬರ ಪೀಡಿತ ಎಂದು ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಸರಿಯಾಗಿ ಬರ ಅಧ್ಯಯನ ಮಾಡಬೇಕು.  ಧಾರವಾಡ ಜಿಲ್ಲೆಯಲ್ಲಿ ಮಳೆ ಕೊರತೆ ಇದೆ. ಒಂದು ತಾಲ್ಲೂಕು ಸಹ ಬರಪೀಡಿತ ಅಂತಾ ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.ಸರ್ಕಾರದಲ್ಲಿ ಗೊಂದಲವಿದೆ jk02_new jk02 new

Key words: Siddaramaiah,  confusion, government, Union Minister, Prahlad Joshi