Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅಧಿವೇಶನದಲ್ಲಿ ಹನೂರು ಶೂಟೌಟ್ ಕೇಸ್ ಪ್ರಸ್ತಾಪ;  ನ್ಯಾಯಾಂಗ ತನಿಖೆಗೆ ವಿಪಕ್ಷಗಳ ಪಟ್ಟು

ಅಧಿವೇಶನದಲ್ಲಿ ಹನೂರು ಶೂಟೌಟ್ ಕೇಸ್ ಪ್ರಸ್ತಾಪ;  ನ್ಯಾಯಾಂಗ ತನಿಖೆಗೆ ವಿಪಕ್ಷಗಳ ಪಟ್ಟು

ಬೆಂಗಳೂರು,ಆಗಸ್ಟ್,17,2026 (www.justkannada.in):  ಚಾಮರಾಜನಗರ ಹನೂರಿನ ಕಾವೇರಿ ವನ್ಯಜೀವಿಧಾಮದ ಹೊಳೆಮುರದಟ್ಟಿ (ಶಾಡ್ಯ) ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಗುಂಡೇಟಿಗೆ ಮೂವರು ಬೇಟೆಗಾರರು ಸಾವನ್ನಪ್ಪಿದ ‍ಪ್ರಕರಣ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗಿದೆ.

ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ಕುರಿತು ಪ್ರಸ್ತಾಪಿಸಿದ್ದು, ಇದೊಂದು ಅಮಾನವೀಯ ಕೃತ್ಯ.  ಈ ಕೇಸ್ ನಲ್ಲಿ ರಾಜ್ಯ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನ್ಯಾಯಾಂಗ ತನಿಖೆಗೆ ನಡೆಸಬೇಕು. ರಾಜ್ಯ ಸರ್ಕಾರ ಮೊದಲ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಪರಿಷತ್ ನಲ್ಲಿ ಗದ್ದಲ ಉಂಟಾದ ಹಿನ್ನೆಲೆ ಸಭಾಪತಿ ಸಲೀಂ ಅಹ್ಮದ್ ಅವರು ಕಲಾಪವನ್ನ ಕೆಲಕಾಲ ಮುಂದೂಡಿದರು.

ವಿಧಾನಸಭೆಯಲ್ಲೂ ಪ್ರಸ್ತಾಪ

ಘಟನೆ ಕುರಿತು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದರು.  ಏನ್ ಕೌಂಟರ್ ಆಗಿದೆ ತಮಿಳುನಾಡು ಸಿಎಂ ಮಾತನಾಡಿದ್ದಾರೆ ಸರ್ಕಾರ ಮೂವರನ್ನ ಕೊಲೆ ಮಾಡಿದೆ ಶಿಕ್ಷೆ ಆಗಬೇಕಲ್ವಾ? ಎಂದು ಕಿಡಿಕಾರಿದರು.ಅಧಿವೇಶನದಲ್ಲಿ ಹನೂರು ಶೂಟೌಟ್ ಕೇಸ್ ಪ್ರಸ್ತಾಪ jk02_new jk02 new

Key words  shootout case, session; Opposition parties, demand, judicial probe