Sunday, September 27, 2026

BDA Apartments

ಹಲಸಂದೆ ಬೆಳೆ ವೀಕ್ಷಣೆ: ರೈತರ ಜೊತೆ ಚರ್ಚಿಸಿದ ಸಚಿವ ಎನ್. ಚಲುವರಾಯಸ್ವಾಮಿ BDA JK_...
Home Front Page ಹಲಸಂದೆ ಬೆಳೆ ವೀಕ್ಷಣೆ: ರೈತರ ಜೊತೆ ಚರ್ಚಿಸಿದ  ಸಚಿವ ಎನ್. ಚಲುವರಾಯಸ್ವಾಮಿ

ಹಲಸಂದೆ ಬೆಳೆ ವೀಕ್ಷಣೆ: ರೈತರ ಜೊತೆ ಚರ್ಚಿಸಿದ  ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ ಆಗಸ್ಟ್,10,2026 (www.justkannada.in): ಸಚಿವ ಎನ್. ಚಲುವರಾಯಸ್ವಾಮಿ ಅವರು  ಇಂದು ನಾಗಮಂಗಲ ತಾಲ್ಲೂಕಿನ ಗಂಗಾಸಮುದ್ರ ಗ್ರಾಮದಲ್ಲಿ ದೇವರಾಜು ಅವರ ಜಮೀನಿಗೆ ಭೇಟಿ ನೀಡಿ, ಬೆಳೆಸಲಾಗಿರುವ ಹಲಸಂದೆ ಬೆಳೆಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬೆಳೆಯ ಸ್ಥಿತಿ, ಮಳೆ ಕೊರತೆ ಹಾಗೂ ಬೆಳೆ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ರೈತರಿಂದ ಮಾಹಿತಿ ಪಡೆದರು. ಬೆಳೆ ಬೆಳವಣಿಗೆ, ಇಳುವರಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ಚಲುವರಾಯಸ್ವಾಮಿ ಚರ್ಚಿಸಿದರು.

ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಕೃಷಿ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವ ಮೂಲಕ ಬೆಳೆ ನಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಪಡೆಯಬೇಕು ಎಂದು ಸಚಿವ ಎನ್. ಚಲುವರಾಯಸ್ವಾಮಿ ಅವರು ಮನವಿ ಮಾಡಿದರು.ಹಲಸಂದೆ ಬೆಳೆ ವೀಕ್ಷಣೆ chaluvarayaswamy chaluvarayaswamy 2

ರೈತರಿಗೆ ಬೆಳೆ ವಿಮೆಯ ಮಹತ್ವದ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೃಷಿಯಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ಅನೇಕ ಅನಿಶ್ಚಿತತೆಗಳಿದ್ದು, ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ಅತ್ಯಂತ ಪ್ರಮುಖವಾಗಿದೆ. ಯಾವುದೇ ಕಾರಣಕ್ಕೂ ರೈತರು ಬೆಳೆ ವಿಮೆಯಿಂದ ವಂಚಿತರಾಗಬಾರದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.ರೈತರ ಜೊತೆ ಚರ್ಚಿಸಿದ ಸಚಿವ ಎನ್. ಚಲುವರಾಯಸ್ವಾಮಿ jk02_new jk02 new

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್. ನಂದಿನಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mandya, Halasande crop, Minister, N. Chaluvarayaswamy, farmers