Sunday, September 20, 2026

BDA Apartments

ಸಿಎಂ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರು: ಪ್ರಮಾಣ ವಚನ ಸ್ವೀಕಾರ BDA JK_Adv BDA Adv
Home Front Page ಸಿಎಂ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರು: ಪ್ರಮಾಣ ವಚನ ಸ್ವೀಕಾರ

ಸಿಎಂ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರು: ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಆಗಸ್ಟ್,3,2026 (www.justkannada.in):  ಇಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಭರ್ತಿಯಾಗಿದ್ದು  ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು ನೂತನ ಸಚಿವರಾಗಿ  ಬಸವರಾಜ ರಾಯರೆಡ್ಡಿ ಚಲುವರಾಯಸ್ವಾಮಿ, ಲಕ್ಷ್ಮಣ್ ಸವದಿ, ಮಧು ಬಂಗಾರಪ್ಪ ಬಿ. ನಾಗೇಂದ್ರ, ಎಸ್ ಎಸ್ ಮಲ್ಲಿಕಾರ್ಜುನ, ಎಂ.ಪಿ ನರೇಂದ್ರ ಸ್ವಾಮಿ, ಪುಟ್ಟರಂಗ ಶೆಟ್ಟಿ, ಟಿ.ರಘುಮೂರ್ತಿ, ರಿಜ್ವಾನ್ ಅರ್ಷಾದ್, ರುದ್ರಪ್ಪ ಲಮಾಣಿ , ಸಂತೋಷ್ ಲಾಡ್, ಕೆಎಂ ಶಿವಲಿಂಗೇಗೌಡ ,ಶಿವರಾಜ್ ತಂಗಡಗಿ ವಿಜಯಾನಂದ ಕಾಶಪ್ಪನವರ್, ಜಮೀರ್ ಅಹ್ಮದ್ ಖಾನ್, ಅಜಯ್ ಸಿಂಗ್, ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ,  ಕೆಸ್ ಬಸವಂತಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದರು.ಸಿಎಂ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರು oath.jpg1

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾ ವಿಧಿ ಬೋಧಿಸಿದರು.  ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್  ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.ಪ್ರಮಾಣ ವಚನ ಸ್ವೀಕಾರ jk02_new jk02 new

Key words:, Cabinet expansion, new ministers, take oath,