Wednesday, September 16, 2026

BDA Apartments

ನಾಳೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಗೆ ಅವಕಾಶವಿಲ್ಲ- ಗೃಹ ಸಚಿವ ಪ್...
Home Front Page ನಾಳೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಗೆ ಅವಕಾಶವಿಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಾಳೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಗೆ ಅವಕಾಶವಿಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಆಗಸ್ಟ್,1,2026 (www.justkannada.in):  ನಾಳೆ ರಾಜ್ಯಾದ್ಯಂತ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ನಡೆಯಲಿದ್ದು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾಳೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಹಿಜಾಬ್ ಧರಿಸಿ  ಬರಲು ಅವಕಾಶವಿಲ್ಲ. ಧಾರ್ಮಿಕ ಉಡುಪುಗಳಿಗೆ ಅವಕಾಶವಿದೆ.  ಜನಿವಾರ, ಮಾಂಗಲ್ಯ ಸರ ಉಂಗುರಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.ನಾಳೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ police

ಸಾಮಾಜಿಕ ಜಾಲತಾಣದ ಬಗ್ಗೆ ನಿಗಾವಹಿಸಬೇಕು  ಕಳೆದ ಬಾರಿ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಗಲಾಟೆ ಮಾಡಿದರು. ಪೇಪರ್ ವಿತರಣೆ ಕೊರತೆಯಿಂದ ತಡವಾಗಿ ವಿತರಣೆ ಆಯಿತು.  ಆಗ ಪೇಪರ್ ಲೀಕ್ ಆಗಿದೆ ಅಂತಾ ಅಪಪ್ರಚಾರ ಆಯಿತು. ಈ ಬಗ್ಗೆಯೂ ನಿಗಾ ವಹಿಸಿದ್ದೇವೆ ಗೈರಾದ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ  ಅಲ್ಲೇ ಇಡಬೇಕು.  ಯಾವುದೇ ಎಲೆಕ್ಟ್ರಾನಿಕ್ ವಸ್ತು ತೆಗೆದುಕೊಂಡು ಹೋಗುವ ಹಾಗಿಲ್ಲ ಶೂ ಮಾಸ್ಕ್ ಜಾಕೆಟ್ ಸೇರಿ ಯಾವುದಕ್ಕೂ ಅವಕಾಶವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.ಹಿಜಾಬ್ ಗೆ ಅವಕಾಶವಿಲ್ಲ jk02_new jk02 new

Key words: Police Constable, Exam, Tomorrow, Home Minister, Priyank Kharge