Wednesday, September 16, 2026

BDA Apartments

ಮುಂಗಾರು ಚುರುಕು: ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಳ BDA JK_Adv BDA Adv
Home Front Page ಮುಂಗಾರು ಚುರುಕು: ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮುಂಗಾರು ಚುರುಕು: ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಂಡ್ಯ,ಆಗಸ್ಟ್,1,2026 (www.justkannada.in): ಕಳೆದ ಎರಡ್ಮೂರು ದಿನಗಳಿಂದ  ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ.

ಹೌದು, ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ನೀಡಿರುವ ಬೆನ್ನಲ್ಲೆ ಕಾವೇರಿ ಕೊಳ್ಳದ ಭಾಗದಲ್ಲಿ ಮಳೆಯಾಗುತ್ತಿದ್ದು ಒಳಹರಿವು ಹೆಚ್ಚಳವಾಗುತ್ತಿದೆ.   ಒಳಹರಿವು 46 ಸಾವಿರ ಕ್ಯೂಸೆಕ್ ದಾಟಿದೆ  ಎಂಬ ಮಾಹಿತಿ ಲಭ್ಯವಾಗಿದೆ.ಮುಂಗಾರು ಚುರುಕು BDA JK_Adv BDA Adv

ಕಬಿನಿ ಜಲಾಶಯಕ್ಕೆ 11 ,747 ಕ್ಯೂಸೆಕ್ ಒಳಹರಿವು ಇದೆ. ಕೆಆರ್ ಎಸ್ ಜಲಾಶಯಕ್ಕೆ 13,522 ಕ್ಯೂಸೆಕ್, ಹಾರಂಗಿ ಜಲಾಶಯಕ್ಕೆ 9,896 ಕ್ಯೂಸೆಕ್,  ಹೇಮಾವತಿ  ಜಲಾಶಯಕ್ಕೆ 11,686  ಕ್ಯೂಸೆಕ್ ಒಳಹರಿವಿದೆ ಎಂಬ ಮಾಹಿತಿ ಲಭ್ಯವಾಗಿದೆ.ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಹೆಚ್ಚಳ kabini1

ಕಬಿನಿ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು 4 ಅಡಿ ಮಾತ್ರ ಬಾಕಿ ಇದೆ ಎನ್ನಲಾಗಿದೆ.  ಕೆಆರ್ ಎಸ್ ಗೆ ಒಳಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನೀರಿನ ಮಟ್ಟ 94 ಅಡಿಗೆ ಏರಿಕೆಯಾಗಿದೆ.2026 www justkannada jk02_new jk02 new

Key words: Monsoon, Cauvery, basin, reservoirs, Inflow,  increases