Sunday, September 13, 2026

BDA Apartments

Home Front Page ನಂಜನಗೂಡಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ_

ನಂಜನಗೂಡಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ_

ಮೈಸೂರು,ಜುಲೈ,27, 2026 (www.justkannada.in):  ನಂಜನಗೂಡಿನಲ್ಲಿ  ನಡೆದ ಈಶ ಔಟ್‌ರೀಚ್ ವತಿಯಿಂದಆಯೋಜಿಸಿರುವ ಈಶ ಗ್ರಾಮೋತ್ಸವ 2026ರ ಕ್ಲಸ್ಟರ್ ಪಂದ್ಯಾವಳಿಯಲ್ಲಿ ಗ್ರಾಮೀಣ ಕರ್ನಾಟಕದ ಉತ್ಸಾಹಭರಿತ ಕ್ರೀಡಾ ಉತ್ಸವವು  ಕಳೆಗಟ್ಟಿತು.

ಜೆ.ಎಸ್.ಎಸ್ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿಆಯೋಜಿಸಿರುವ ಈಶ ಗ್ರಾಮೋತ್ಸವದ  ಕ್ರೀಡಾ ಉತ್ಸವದಲ್ಲಿ ನಂಜನಗೂಡಿನ  ವಿವಿಧ ಹಳ್ಳಿಗಳಿಂದ ಒಟ್ಟು 290 ಪುರುಷ ವಾಲಿಬಾಲ್ ಆಟಗಾರರು ಮತ್ತು ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು ಭಾಗವಹಿಸಿದ್ದರು.ನಂಜನಗೂಡಿನಲ್ಲಿ ಈಶ ಗ್ರಾಮೋತ್ಸವ ಸಂಭ್ರಮ BDA JK_Adv BDA Adv

ಪುರುಷರ ವಾಲಿಬಾಲ್ ವಿಭಾಗದಲ್ಲಿ ಚಾಮುಂಡಿ ಬಾಯ್ಸ್ (ಹೊಸ ಹುಂಡಿ) ತಂಡ ಪ್ರಥಮ ಸ್ಥಾನ  ಪಡೆದು ಜಯಭೇರಿಗಳಾಗಿದ್ದು, 2ನೇ ಸ್ಥಾನವನ್ನು  ಅಪ್ಪು ಬಾಯ್ಸ್ (ಕಳಲೆ) ತಂಡ, 3ನೇ ಸ್ಥಾನವನ್ನು ಮಿಥಿಲಾ ಮಿರ್ಲೆ (KR ನಗರ) ತಂಡ ಮತ್ತು 4ನೇ ಸ್ಥಾನವನ್ನು ವೋಲಿ ಸ್ಪೈಕರ್ಸ್ (ದೇವರಾಯಶೆಟ್ಟಿಪುರ) ತಂಡ  ಪಡೆದುಕೊಂಡಿವೆ.

ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ಚಾಮುಂಡಿ ಗರ್ಲ್ಸ್ (ಹೆಡತಲೆ) ತಂಡ ಮೊದಲ ಸ್ಥಾನ ಚಾಮುಂಡೇಶ್ವರಿ (ಕಳಲೆ) ತಂಡ 2ನೇ ಸ್ಥಾನ, TNC ಗರ್ಲ್ಸ್  (TN ಪುರ) ತಂಡವು 3ನೇ ಸ್ಥಾನ, ಲಕ್ಷ್ಮೀಕಾಂತ (ಕಳಲೆ) ತಂಡವು 4ನೇ ಸ್ಥಾನವನ್ನು ಪಡೆದುಕೊಂಡಿವು. ವಿಜೇತ ತಂಡಗಳು ಪಂದ್ಯಾವಳಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಇನ್ನು ವಿಭಾಗೀಯ ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.

ಸಂಪೂರ್ಣ ಕ್ಲಸ್ಟರ್ ಮಟ್ಟದ ಕಾರ್ಯಕ್ರಮದಲ್ಲಿ ಹೇಮಂತ್ ಗೌಡ  ಮತ್ತು ಗೀತಾ  ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು.ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ_ isha nanjanagud

ಆನಂದ್ ಕುಮಾರ್ (ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ತರಬೇತುದಾರ) ಮುಖ್ಯ ಅತಿಥಿಗಳಾಗಿದ್ದು, ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ಸಂಜಯ್ ಮತ್ತು ವೀರೇಶ್  ಉಪಸ್ಥಿತರಿದ್ದರು. ವೇದಿಕೆಯಮೇಲೆ ಗಣ್ಯರಾದ  ಉಮಾಶಂಕರ್  (FPO ನಿರ್ದೇಶಕ – ನಂಜುಂಡೇಶ್ವರ ರೈತ ಉತ್ಪನ್ನ ಸಂಸ್ಥೆ), ಹೊನ್ನೇಗೌಡ (ಪ್ರಿನ್ಸಿಪಾಲ್ ,ಜೆಎಸ್ಎಸ್ ಪದವಿ ಕಾಲೇಜು) ಮತ್ತು ಆಶಾ ಉಪಸ್ಥಿತರಿದ್ದರು.

ಈ ವರ್ಷ ಈಶ ಗ್ರಾಮೋತ್ಸವದ 18ನೇ ಆವೃತ್ತಿಯಾಗಿದ್ದು, ಪಂದ್ಯಾವಳಿಯು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ವಿಸ್ತರಿಸಿದೆ. ದೇಶಾದ್ಯಂತ 40,000ಕ್ಕೂ ಹೆಚ್ಚು ಹಳ್ಳಿಗಳಿಂದ 80,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರಿಗೆ ಒಂದೆಡೆ ವೇದಿಕೆಯನ್ನು ಕಲ್ಪಿಸುತ್ತಿದೆ.

ಕ್ರೀಡೆಯ ಮೂಲಕ ಗ್ರಾಮೀಣ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈಶ ಗ್ರಾಮೋತ್ಸವವು ರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇದನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ (NSPO) ಎಂದು ಗುರುತಿಸಿದೆ. ಬೇರುಮಟ್ಟದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸುವಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2018ರಲ್ಲಿ ಈ ಉಪಕ್ರಮಕ್ಕೆ ಭಾರತದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ‘ರಾಷ್ಟ್ರೀಯ ಖೇಲ್ ಪ್ರೋತ್ಸಾಹನ ಪುರಸ್ಕಾರ’ ನೀಡಿ ಗೌರವಿಸಲಾಗಿದೆ.

Key words: Isha Gramotsava, celebrations, Nanjangud