Sunday, September 13, 2026

BDA Apartments

ಲಾಬಿ ಅವಶ್ಯಕತೆ ಇಲ್ಲ, ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ- ಶಾಸಕ ತನ್ವೀರ್ ಸ...
Home Front Page ಲಾಬಿ ಅವಶ್ಯಕತೆ ಇಲ್ಲ, ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ- ಶಾಸಕ ತನ್ವೀರ್ ಸೇಠ್

ಲಾಬಿ ಅವಶ್ಯಕತೆ ಇಲ್ಲ, ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ- ಶಾಸಕ ತನ್ವೀರ್ ಸೇಠ್

ಮೈಸೂರು,ಜುಲೈ,27,2026 (www.justkannada.in): ನಾನು ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಈ ಬಾರಿ ಸಚಿವ ಸ್ಥಾನದ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ. ಇಂದು ವರಿಷ್ಠರ ಭೇಟಿಗೆ ರಾಜ್ಯ ನಾಯಕರು ತೆರಳಿದ್ದಾರೆ. ನಾಳೆ ನಿಶ್ಚಿತವಾಗಿ ಸಭೆ ನಡೆಯುತ್ತದೆ.ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.ಲಾಬಿ ಅವಶ್ಯಕತೆ ಇಲ್ಲ BDA JK_Adv BDA Adv

ಪಕ್ಷ ನಿಷ್ಟೆಯೇ ನನ್ನನ್ನು ಕಾಪಾಡುತ್ತದೆ. ಕಳೆದ ಬಾರಿ ಸಿಎಂ ಮೈಸೂರಿನವರೇ ಆಗಿದ್ದರು. ಹೀಗಾಗಿ ನನಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಿಗುತ್ತದೆ. ನನ್ನ ನಿಷ್ಠೆ ನನ್ನ ಕೆಲಸ ಎಲ್ಲವೂ ಹೈಕಮಾಂಡ್ ಗೊತ್ತಿದೆ. ಹೀಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ jk02_new jk02 new

Key words: definitely, ministerial, position, MLA, Tanveer Sait