ಚುನಾವಣಾ ರಾಜಕೀಯ ಬಿಟ್ರೂ ಸಕ್ರಿಯ ರಾಜಕಾರಣದಲ್ಲಿ ಕೊನೆವರೆಗೂ ಇರ್ತಾರೆ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,27,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕೀಯ ನಿವೃತ್ತಿ ವಿಚಾರ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಚುನಾವಣಾ ರಾಜಕೀಯವನ್ನು ಬಿಟ್ಟರೂ ಸಕ್ರಿಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರು ಮೊದಲನಿಂದಲೂ ಅದನೇ ಹೇಳಿದರು 2028 ರ ಚುನವಣೆಗೆ ನಿಲ್ಲುವುದಿಲ್ಲ ಎಂದು. ಚುನಾವಣಾ ರಾಜಕೀಯ ಬಿಟ್ಟರೂ ಸಕ್ರೀಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತಾರೆ. ರಾಜ್ಯದ ಶೋಷಿತರ ಧ್ವನಿಯಾಗಿ ಇರುತ್ತಾರೆ. ತಂದೆಯವರು ಗಟ್ಟಿ ನಿರ್ಧಾರ ಮಾಡಿದ್ದಾರೆ. ಅದನ್ನು ಬದಲಾಯಿಸಿ ಅಂತ ಹೇಳುವುದಕ್ಕೆ ಅಗುವುದಿಲ್ಲ. ಅವರಿಗೆ ವಯಸ್ಸಾಗಿದೆ. ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಲಿ ಎಂದರು.

ಇ‌ನ್ನಾದರೂ ಕೇಂದ್ರ ಸರ್ಕಾರ ಆ ಮನಸ್ಥಿತಿಯನ್ನ ಬಿಡಬೇಕು..

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಎಷ್ಟೋ ವರ್ಷದಿಂದ ಏನೇ ಹಗರಣ ಮಾಡಿದರೂ ಸಚಿವರ ಕೈಯಲ್ಲಿ ರಾಜಿನಾಮೆ ಕೊಡಿಸುತ್ತಿರಲಿಲ್ಲ. ಜನರು ಎಷ್ಟೇ ಆಕ್ಷೇಪಣೆ ಮಾಡಿದರೂ ನಾವು ಮಾತ್ರ ರಾಜೀನಾಮೆ ಕೊಡುವುದಿಲ್ಲ ಎನ್ನುವಂತೆ ಇದ್ದರು. ಬಿಜೆಪಿಯವರ ಮನಸ್ಥಿತಿ ಜನರಿಗೆ ನಾವು ಹೆದರುವುದಿಲ್ಲ ಎನ್ನುವಂತೆ ಇತ್ತು. ಶಿಕ್ಷಣ ಸಚಿವರ ರಾಜೀನಾಮೆ ಕೇಂದ್ರ ಸರ್ಕಾರಕ್ಕೆ ಒಂದು ಪಾಠವಾಗಿದೆ. ಜನರು ನೀವು ಏನೇ ಮಾಡಿದರೂ ಸುಮ್ಮನೆ ಇರುವುದಿಲ್ಲ  ಎಂದರು.

ನಾವು ಏನೇ ತಪ್ಪು ಮಾಡಿದರೂ ಯಾರಿಗೂ ಬಗ್ಗಲ್ಲ ಎಂಬ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇತ್ತು. ಈಗ ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ‌. ಏನೇ ಮಾಡಿದರೂ ನಾವು ಅದನ್ನ ಅರಗಿಸಿಕೊಳ್ಳುತ್ತೇವೆ ಎಂಬ ಮನಸ್ಥಿತಿಯಲ್ಲಿತ್ತು. ಇ‌ನ್ನಾದರೂ ಕೇಂದ್ರ ಸರ್ಕಾರ ಆ ಮನಸ್ಥಿತಿಯನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

ಕೆಪಿಎಸ್ ಸಿ ಹಗರಣ: ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್

ಕೆಪಿಎಸ್ ಸಿ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಕೆಪಿಎಸ್ಸಿ ಅಧ್ಯಕ್ಷರನ್ನ ನೇಮಕ ಮಾಡಿದ್ದು ಬಿಜೆಪಿ ಸರ್ಕಾರ‌. ಅವರನ್ನ ಬದಲಾಯಿಸುವ ಅಧಿಕಾರವೂ ಸರ್ಕಾರಕ್ಕೆ ಇರಲಿಲ್ಲ. ರಾಜ್ಯಪಾಲರ ಮೂಲಕ ಅವರ ವಜಾ ಆಗಿದೆ. ಈಗ ಅಂತಹ ಭ್ರಷ್ಟನ ಪರವಾಗಿ ಬಿಜೆಪಿಯ ಬೆಂಬಲಿತ ವಕೀಲರೇ ಕೋರ್ಟ್ ಗೆ ಹೋಗಿದ್ದಾರೆ. ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್

ಒಂದು ಕಡೆ ಹಗರಣ ಎನ್ನುತ್ತಾರೆ, ಮತ್ತೊಂದು ಕಡೆ ಹಗರಣ ಮಾಡಿದವರ ಕಡೆ ನಿಲ್ಲುತ್ತಾರೆ‌. ಬಿಜೆಪಿ ಎಲ್ಲಾ ವಿಚಾರದಲ್ಲೂ ಇದೇ ಮನಸ್ಥಿತಿಯಲ್ಲಿದೆ ಎಂದು ಟಾಂಗ್ ಕೊಟ್ಟರು.

ಎರಡನೇ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಗೊಂದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂಧ್ರ ಸಿದ್ದರಾಮಯ್ಯ, ಮೊದಲ ಅಷಾಢ ಮಾಸದಲ್ಲಿ ಎಲ್ಲಾ ಸರಿ ಇತ್ತು. ಎರಡನೇ ವಾರ ಸ್ವಲ್ಪ ವಾಹನಗಳು ಹೆಚ್ಚು ಬೆಟ್ಟಕ್ಕೆ ಬಂದಿದ್ದವು ಎಂದು ಗೊತ್ತಾಗಿದೆ/ ಮುಂದಿನ ವಾರಗಳಲ್ಲಿ ಗೊಂದಲಗಳನ್ನು ಸರಿ ಮಾಡುತ್ತೇವೆ ಎಂದರು.

ಬರಗಾಲದಲ್ಲಿ ರೈತರಿಗೆ ಸಾಲ ಮರುಪಾವತಿ ನೋಟಿಸ್ ವಿಚಾರ. ಯಾವುದೇ ಫೈನಾನ್ಸ್ ಕಂಪನಿಗಳು ರೈತರನ್ನು ಪೀಡಿಸಬಾರದು ಎಂದು ಈಗಾಗಲೇ ಕಾನೂನು ತಂದಿದ್ದೇವೆ. ನೋಟಿಸ್ ಕೊಟ್ಟಿದ್ದಾರೆ ಅದನ್ನು ಸರ್ಕಾರ ಗಮನಕ್ಕೆ ತರುತ್ತೇನೆ ಎಂದರು.

ಸಂಪುಟ ಪುನರ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ನಾಯಕರನ್ನು ಹೈಕಮಾಂಡ್ ಸಂಜೆ ದೆಹಲಿಗೆ ಕರೆದಿದ್ದಾರೆ. ಈ ವಾರ ಸಂಪುಟ ಪುನರಚನೆಯಾಗಬಹುದು. ಮೈಸೂರಿನಲ್ಲಿ ಹಿರಿಯ ರಾಜಕಾರಣಿಗಳು ಇದ್ದಾರೆ . ನೋಡೊಣ ಯಾರಿಗೆ ಸಚಿವ ಸ್ಥಾನ ಸಿಗುತ್ತಾದೆ ಎಂದರು.

Key words: Siddaramaiah, electoral politics, Minister, Yathindra Siddaramaiah