ನಭಕ್ಕೆ ಹಾರಿದ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1’

ಶ್ರೀಹರಿಕೋಟ,ಜುಲೈ,18,2026 (www.justkannada.in): ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ದಿಪಡಿಸಿರುವ ದೇಶದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ‘ವಿಕ್ರಮ್-1 ಯಶಸ್ವಿಯಾಗಿ ಉಡಾವಣೆಯಾಗಿದೆ.

ಆಂಧ್ರದ ಶ್ರೀಹರಿಕೋಟದಲ್ಲಿನ ಸತಿಶ್ ಧವನ್‍ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್ 1 ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿದೆ.  ಖಾಸಗಿಯಾಗಿ ಅಭಿವೃದ್ದಿಪಡಿಸಿದ ದೇಶದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದ್ದು  ಮಿಷನ್ ಆಗಮನ್ ಯೋಜನೆಯಡಿ ವಿಕ್ರಮ್ 1 ನಿರ್ಮಾಣ  ಮಾಡಲಾಗಿದೆ.

1300 ಕೋಟಿ ರೂ ವೆಚ್ಚದಲ್ಲಿ ಸ್ಕೈರೂಟ್ ಏರೋಸ್ಪೇಸ್ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದೀಗ 12 ಗಂಟೆ 5ನಿಮಿಷಕ್ಕೆ ನಭಕ್ಕೆ ಹಾರಿದೆ ಎನ್ನಲಾಗಿದೆ.

Key words:  Vikram-1, first, private spacecraft, Launch