ಮೈಸೂರು: ಮದುವೆಯಾಗಿ 15 ದಿನದಲ್ಲೇ ನವವಧು ದಾರುಣ ಸಾವು

ಮೈಸೂರು,ಜುಲೈ,17,2026 (www.justkannada.in): ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ 20 ವರ್ಷದ ಮೇಘನಾ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೇಘನಾ ಅವರಿಗೆ ಕೇವಲ 15 ದಿನಗಳ ಹಿಂದಷ್ಟೇ ಬಿದರಗೂಡು ಗ್ರಾಮದ ಪುನೀತ್ ಅವರೊಂದಿಗೆ ವಿವಾಹವಾಗಿತ್ತು.

ಆರ್.ಟಿ.ನಗರದ ಸಮೀಪ ನಿನ್ನೆ ಸಂಜೆ ಮನೆಗೆ ಮರಳುತ್ತಿದ್ದ ವೇಳೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ. ಅಪಘಾತದ ವೇಳೆ ಹೆಲ್ಮೆಟ್ ಧರಿಸದಿದ್ದ ಹಿನ್ನೆಲೆಯಲ್ಲಿ ಮೇಘನಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಪತಿ ಪುನೀತ್ ಅವರ ತಲೆ, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವದಂಪತಿಯ ಬದುಕು ಆರಂಭವಾದ ಕೆಲವೇ ದಿನಗಳಲ್ಲಿ ಸಂಭವಿಸಿದ ಈ ದುರಂತ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

ENGLISH SUMMARY..

Mysuru: Newlywed Woman Dies in Bike Accident 15 Days After Marriage

A 20-year-old woman, Meghana from Makanahundi village in Mysuru taluk, died in a road accident near R.T. Nagar. She had married Puneeth of Bidaragoodu village just 15 days ago.

The accident occurred on Thursday evening when the couple was returning home. Their bike reportedly skidded, causing both to fall. Meghana, who was not wearing a helmet, suffered fatal injuries and died on the spot.

Puneeth sustained injuries to his head, hands, and legs and is currently undergoing treatment at a hospital.

Key words: Mysuru, Newlywed, Woman, Dies, Bike Accident