Wednesday, September 2, 2026

BDA Apartments

Home Front Page ಡಿ.31ರೊಳಗೆ GBA ಚುನಾವಣೆ ನಡೆಸಿ: ಮತ್ತೆ ಕಾಲಾವಕಾಶ ವಿಸ್ತರಿಸಿದ ಸುಪ್ರೀಂ

ಡಿ.31ರೊಳಗೆ GBA ಚುನಾವಣೆ ನಡೆಸಿ: ಮತ್ತೆ ಕಾಲಾವಕಾಶ ವಿಸ್ತರಿಸಿದ ಸುಪ್ರೀಂ

ಬೆಂಗಳೂರು,ಜುಲೈ, 17,2026 (www.justkannada.in): ಡಿಸೆಂಬರ್ 31ರೊಳಗೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯನ್ನು ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ  ಸುಪ್ರೀಂಕೋರ್ಟ್  ಸೂಚನೆ ನೀಡಿದೆ.

ಜಿಬಿಎ ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ  ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್​, ಡಿಸೆಂಬರ್​ 31ರೊಳಗೆ ಚುನಾವಣೆ ನಡೆಸಲು ಸೂಚಿಸಿದೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ, ಕರುಡು ಮತದಾರರ ಪಟ್ಟಿ ಪ್ರಕಟಣೆ, ಸಾರ್ವಜನಿಕ ಆಕ್ಷೇಪಣೆ ಸ್ವೀಕಾರ ಸೇರಿದಂತೆ ನಾನಾ ಕಾರ್ಯಗಳಲ್ಲಿ ಸಿಬ್ಬಂದಿ ಬ್ಯುಸಿ ಇರುವ ಹಿನ್ನೆಲೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಸಲು ಕಾಲಾವಕಾಶ ಕೋರಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರ ಪರ ವಕೀಲರು, ಎಸ್ ಐಆರ್ ನಲ್ಲಿ ಎಲ್ಲಾ ಸಿಬ್ಬಂದಿಗಳು ತೊಡಗಿದ್ದಾರೆ. ಹೀಗಾಗಿ ಜಿಬಿಎ ಚುನಾವಣೆ ನಡೆಸಲು ಡಿಸೆಂಬರ್​ ವರೆಗೆ ಸಮಯ ನೀಡಬೇಕು ಎಂದು ರಾಜ್ಯ ಚುನಾವಣೆ ಆಯೋಗ ಸಹ ಮನವಿ ಮಾಡಿದೆ ಎಂದು ತಿಳಿಸಿದರು.

ಡಿಸೆಂಬರ್ ಅಂತ್ಯದ ಒಳಗೆ ಚುನಾವಣೆ ಮುಗಿಸಿ, ಇದೇ ಕೊನೆ ಅವಕಾಶ. ಡಿಸೆಂಬರ್ ನಲ್ಲಿ ಚುನಾವಣೆ ಮುಂದೂಡಲು ಯಾವುದೇ ನೆಪ ಅಥವಾ ಹೊಸ ಕಾರಣಗಳನ್ನು ಮುಂದಿಡಬಾರದು ಎಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತು.

Key words: GBA elections, December, Supreme Court, extends, deadline