ರೋಗಿ ಮೃತಪಟ್ಟರೆ ಆಸ್ಪತ್ರೆ ಬಿಲ್ ವಸೂಲಿ ಬೇಡ: ತಮಿಳುನಾಡು ಸಿಎಂ ವಿಜಯ್ ಪ್ರಸ್ತಾವನೆ

ಚೆನ್ನೈ,ಜುಲೈ,16,2026 (www.justkannada.in): ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಸ್ಪತ್ರೆಗಳ ಜವಾಬ್ದಾರಿತನ ಹೆಚ್ಚಿಸುವ ಉದ್ದೇಶದಿಂದ ಮಹತ್ವದ ಸುಧಾರಣಾ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಪ್ರಸ್ತಾವನೆಯ ಪ್ರಕಾರ, ಚಿಕಿತ್ಸೆ ವೇಳೆ ರೋಗಿ ಮೃತಪಟ್ಟರೆ ಆಸ್ಪತ್ರೆಗಳು ಮೃತರ ಕುಟುಂಬದಿಂದ ಚಿಕಿತ್ಸಾ ವೆಚ್ಚವನ್ನು ವಸೂಲಿ ಮಾಡಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕುಟುಂಬದವರು ತಮ್ಮ ಆತ್ಮೀಯರನ್ನು ಕಳೆದುಕೊಂಡ ದುಃಖದಲ್ಲಿರುವಾಗ ಭಾರೀ ಆಸ್ಪತ್ರೆ ಬಿಲ್‌ ಗಳ ಹೊರೆ ಹೊರಿಸಬಾರದು ಎಂಬುದು ತಮಿಳುನಾಡು ಸಿಎಂ ವಿಜಯ್ ಅವರ ವಾದವಾಗಿದೆ.

ಈ ಪ್ರಸ್ತಾವನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬೆಂಬಲಿಗರು, ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿತನ ಮೂಡಲಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಸಿಗಲಿದೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ, ವೈದ್ಯಕೀಯ ಫಲಿತಾಂಶಗಳು ಹಲವು ಅಂಶಗಳ ಮೇಲೆ ಅವಲಂಬಿತವಾಗಿರುವುದರಿಂದ ಪ್ರತಿಯೊಂದು ಸಾವಿಗೂ ಆಸ್ಪತ್ರೆಗಳನ್ನು ಆರ್ಥಿಕವಾಗಿ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ವಿರೋಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆ ಕಾನೂನಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವೈದ್ಯಕೀಯ ನೈತಿಕತೆ, ಆಸ್ಪತ್ರೆಗಳ ಬಿಲ್ಲಿಂಗ್ ಪದ್ಧತಿ ಹಾಗೂ ರೋಗಿಗಳ ಹಕ್ಕುಗಳ ಕುರಿತು ದೇಶಾದ್ಯಂತ ಹೊಸ ಚರ್ಚೆಗೆ ಇದು ಕಾರಣವಾಗಿದೆ.

ENGLISH SUMMARY…

Tamil Nadu CM Vijay Proposes ‘No Hospital Bill if Patient Dies’ Rule

Tamil Nadu Chief Minister Vijay has proposed a major healthcare reform, suggesting that hospitals should not charge treatment fees if a patient dies during treatment.

According to Vijay, families grieving the loss of a loved one should not face the additional burden of paying large medical bills.

The proposal has sparked nationwide debate. Supporters say it would improve hospital accountability and protect families from financial hardship, while critics argue that hospitals cannot be held responsible for every death, as medical outcomes depend on many factors.

The proposal has reignited discussions on medical ethics, hospital billing practices, and patient rights across India.

Key words: Tamil Nadu CM, Vijay, No, Hospital Bill, Patient, Dies