ಬೆಂಗಳೂರು,ಜುಲೈ,16,2026 (www.justkannada.in): ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ಪತಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ವಪ್ನ ಪತಿಯಿಂದ ಹತ್ಯೆಯಾದ ಪತ್ನಿ. ಮನೋಜ್ ಎಂಬಾತನೇ ಪತ್ನಿಯನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಪತಿ.
ಪತ್ನಿ ಸ್ವಪ್ನ 4 ತಿಂಗಳ ಗರ್ಭಿಣಿಯಾಗಿದ್ದು ಈ ಮಧ್ಯೆ ನಾಯಿಬೆಲ್ಟ್ ನಿಂದ ಸ್ವಪ್ನ ಕುತ್ತಿಗೆ ಬಿಗಿದು ಪತಿ ಮನೋಜ್ ಹತ್ಯೆ ಮಾಡಿದು ಬಳಿಕ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ದಕ್ಷೀಣ ವಿಭಾಗದ ಡಿಸಿಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.
Key words: Husband, commits suicide, after,Murder, pregnant wife







