ಸರ್ಕಾರದಿಂದ ಎನ್ ಆರ್ ಐ ಇಲಾಖೆ ಸ್ಥಾಪನೆ ಬಗ್ಗೆ ಚರ್ಚಿಸಿ ತೀರ್ಮಾನ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜುಲೈ,16,2026 (www.justkannada.in): ರಾಜ್ಯ ಸರ್ಕಾರದಿಂದ ಎನ್ ಆರ್ ಐ ಇಲಾಖೆ ಸ್ಥಾಪಿಸುವ ವಿಚಾರ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ಎನ್ ಆರ್ ಐ ಇಲಾಖೆ ಸ್ಥಾಪಿಸುವ ಬಗ್ಗೆ ಇಂದು ನಡೆಸುವ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.  ಎನ್ ಆರ್ ಐ ಇಲಾಖೆ ಆಗಬೇಕೆಂದು ನಮ್ಮ ಪ್ರಣಾಳಿಕೆಯಲ್ಲಿ ಇತ್ತು ಸ್ಕಾಲರ್ ಶಿಪ್ ವಿದೇಶಿ ಅಧ್ಯಯನ ಸೇರಿ ಅನೇಕ ವಿಚಾರಗಳಿವೆ.  ಹೂಡಿಕೆ ಅಂದಾಗ ಕ್ಲಾಶಸ್ ಬರುತ್ತದೆ.  ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ.  ದೆಹಲಿಯಲ್ಲಿ ಏನು ಚರ್ಚೆ ಮಾಡುತ್ತಾರೆ ನೋಡೋಣ ಎಂದರು.

Key words: discussion, NRI department, government, Minister, M.B. Patil