Friday, October 16, 2026

Dasara Wishes

Happy Dasara
Home Front Page ಏಕಾಏಕಿ ಅಲ್ಲ, ಕೇಂದ್ರದ ನಿಯಮದಂತೆ ಬರ ಜಿಲ್ಲೆಗಳೆಂದು ಘೋಷಿಸಬೇಕು- ಸಚಿವ ಯತೀಂದ್ರ ಸಿದ್ದರಾಮಯ್ಯ

ಏಕಾಏಕಿ ಅಲ್ಲ, ಕೇಂದ್ರದ ನಿಯಮದಂತೆ ಬರ ಜಿಲ್ಲೆಗಳೆಂದು ಘೋಷಿಸಬೇಕು- ಸಚಿವ ಯತೀಂದ್ರ ಸಿದ್ದರಾಮಯ್ಯ

ಬೀದರ್,ಜುಲೈ,13,2026 (www.justkannada.in): ಏಕಾಏಕಿ ಬರ ಜಿಲ್ಲೆಗಳೆಂದು ಘೋಷಿಸಲು ಆಗಲ್ಲ. ಕೇಂದ್ರದ ನಿಯಮದಂತೆ ಬರಜಿಲ್ಲೆಗಳೆಂದು ಘೋಷಿಸಬೇಕು ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ,  ರಾಜ್ಯದಲ್ಲಿ ಬರಪ್ರದೇಶಗಳ ಬಗ್ಗೆ ಸಿಎಂ ಸಭೆ ನಡೆಸಿದ್ದಾರೆ.  ಬರ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಅಯಾ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತದೆ.  ಎಲ್ಲ ಸಚಿವರು ಅಯಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಎಲ್ಲೆಲ್ಲಿ ಬರಗಾಲ ಇದೆ ಅಲ್ಲಲ್ಲಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ .ಏಕಾಏಕಿ ಬರ ಜಿಲ್ಲೆ ಎಂದು ಘೋಷಿಸಲು ಆಗಲ್ಲ.  ಅದಕ್ಕೆ ನಿಯಮವಿದೆ. ಕೇಂದ್ರ ಸರ್ಕಾರದ ನಿಯಮದಂತೆ ಬರ ಜಿಲ್ಲೆಗಳೆಂದು ಘೋಷಿಸಬೇಕು ಎಂದು  ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಏಕಾಏಕಿ ಅಲ್ಲ jk02_new jk02 new

Key words:  declared, Drought district, Central rule, Minister, Yathindra Siddaramaiah