Friday, October 16, 2026

Dasara Wishes

Happy Dasara
Home Front Page ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗ್ತೇವೆ- ಸಚಿವ ಸತೀಶ್ ಜಾರಕಿಹೊಳಿ.

ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗ್ತೇವೆ- ಸಚಿವ ಸತೀಶ್ ಜಾರಕಿಹೊಳಿ.

ಬೆಳಗಾವಿ,ಜುಲೈ,13,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗುತ್ತೇವೆ ಎಂದು  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಿದ್ದರಾಮಯ್ಯ  ಪಕ್ಷ ಸಂಘಟನೆಗೆ ಬರುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಮೊದಲಿನಿಂದಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗುತ್ತೇವೆ.  ಅಹಿಂದ ನಾಯಕತ್ವ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಕಾಲ ಕಾಲಕ್ಕೆ ಅದು ಗೊತ್ತಾಗುತ್ತದೆ ಎಂದರು.ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗ್ತೇವೆ- ಸಚಿವ ಸತೀಶ್ ಜಾರಕಿ...

ಆದಷ್ಟು ಬೇಗ ಸಂಫುಟ ವಿಸ್ತರಣೆ ಆಗಬೇಕಿದೆ. ಹರಿಪ್ರಸಾದ್ ಗೆ ಸಚಿವ  ಸ್ಥಾನ ಎಂಬ ವಿಚಾರ ಸಂಬಂಧ ಹರಿಪ್ರಸಾದ್  ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನನಗ ಗೊತ್ತಿಲ್ಲ.  ಬೆಳಗಾವಿ ದೊಡ್ಡ ಜಿಲ್ಲೆ. ಮೂವರಿಗೆ ಸಚಿವ ಸ್ಥಾನ ಕೊಡಬೇಕು. ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದಾಗುತ್ತೆ ನಾವು ಯಾರನ್ನೂ ಸಂಪರ್ಕ ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ಸಿದ್ದರಾಮಯ್ಯ ನೇತೃತ್ವದಲ್ಲೇ 2028ರ ಚುನಾವಣೆಗೆ ಹೋಗ್ತೇವೆ jk02_new jk02 new

Key words:  2028 elections, Siddaramaiah, leadership, Minister, Satish Jarkiholi