Sunday, September 27, 2026

BDA Apartments

ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡುವುದರಲ್ಲಿ ಅರ್ಥ ಇಲ್ಲ- ಡಿಸಿಎಂ ಪರ...
Home Front Page ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡುವುದರಲ್ಲಿ ಅರ್ಥ ಇಲ್ಲ- ಡಿಸಿಎಂ ಪರಮೇಶ್ವರ್

ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡುವುದರಲ್ಲಿ ಅರ್ಥ ಇಲ್ಲ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಜೂನ್,26,2026 (www.justkannada.in): ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡುವುದರಲ್ಲಿ ಅರ್ಥ ಇಲ್ಲ. ರೈತರ ಒಪ್ಪಿಗೆ ಪಡೆದು ಟೌನ್ ಶಿಪ್ ಮಾಡುತ್ತೇವೆ ಎಂದು  ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಯಾವುದೇ ಗೊಂದಲ ಇಲ್ಲದೇ ಟೌನ್ ಶಿಪ್ ಮಾಡಬೇಕು. ರೈತರ ಒಪ್ಪಿಗೆ ಪಡೆದು ಟೌನ್ ಶಿಪ್ ಮಾಡುತ್ತೇವೆ ಪರಿಹಾರ ಸಾಕಾಗ್ತಿಲ್ಲ ಅಂದರೆ ಮತ್ತೆ ಪರಿಶೀಲನೆ ಮಾಡಬಹುದು. ಹೆಚ್ಚು ಪರಿಹಾರ ಬೇಕು ಅಂದರೆ ಕೊಡುವ ಕೆಲಸ ಮಾಡುತ್ತೇವೆ ಎಂದರು.ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡುವುದರಲ್ಲಿ ಅರ್ಥ ಇಲ್ಲ BDA JK_Adv BDA Adv

ಎಐ ಹಬ್ ಗೋಸ್ಕರ ಟೌನ್ ಶಿಪ್ ಮಾಡುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಇದೆ. ಬೆಂಗಳೂರು ಮೇಲೆ ಒತ್ತಡ ಇದೆ ಬೆಂಗಳೂರು ಬಳಿ ಟೌನ್ ಶಿಪ್  ಆದಾಗ ಪ್ರಷರ್ ಕಡಿಮೆಯಾಗುತ್ತೆ. ಬೆಂಗಳೂರಿನ ಹತ್ತಿರ ಕೋಲಾರ ತುಮಕೂರು ಇದೆ . ಹತ್ತಿರದ ನಗರಗಳನ್ನು ಅಭಿವೃದ್ದಿ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ. ತುಮಕೂರು. ಕೋಲಾರದಲ್ಲಿ ಟೌನ್ ಶಿಪ್ ಮಾಡಿದರೇ ಪ್ರಷರ್ ಕಡಿಮೆಯಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.ಡಿಸಿಎಂ ಪರಮೇಶ್ವರ್ jk02_new jk02 new

Key words: farmers, townships, DCM, Parameshwar