ಫಾಕ್ಸ್ ಡೆನ್ ಬಾರ್ ಅಗ್ನಿ ದುರಂತ: ವಾರ ಕಳೆದರೂ ಅಬಕಾರಿ ಡಿಸಿ ವಿರುದ್ಧ ಕ್ರಮವಿಲ್ಲ..?

Mysuru: A week after the tragic fire at Fox Den Bar in Mara Restaurant, Dattagalli, which claimed two lives, no disciplinary action has been taken against Mysuru Excise Deputy Commissioner Nagarajappa, raising serious questions. While a few Excise Department officials and Mysuru City Corporation staff have been suspended, no action against the district Excise chief has been made public. A police complaint has already been registered, and the investigation is underway.

 

ಮೈಸೂರು, ಜೂ.26: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಾರಾ ರೆಸ್ಟೋರೆಂಟ್‌ನ ಫಾಕ್ಸ್ ಡೆನ್ ಬಾರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದು ವಾರ ಕಳೆದರೂ, ಅಬಕಾರಿ ಇಲಾಖೆಯ ಜಿಲ್ಲಾ ಉಪ ಆಯುಕ್ತ (ಡಿಸಿ) ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ನಗರ ಪಾಲಿಕೆಯ ಕೆಲ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗಿದೆ. ಆದರೆ, ಜಿಲ್ಲೆಯ ಅಬಕಾರಿ ಇಲಾಖೆಯ ಮುಖ್ಯಸ್ಥರಾಗಿರುವ ಉಪ ಆಯುಕ್ತ ನಾಗರಾಜಪ್ಪ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರ್ಕಾರ ಅಥವಾ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇಷ್ಟಾದರೂ ಇಲಾಖೆಯ ಹಿರಿಯ ಅಧಿಕಾರಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆ ನಡೆದ ದಿನವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಗ್ನಿ ಅವಘಡಕ್ಕೆ ಕಾರಣವಾದ ಲೋಪದೋಷಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ, ಅಬಕಾರಿ ಡಿಸಿ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿರ್ದೇಶನ ನೀಡಿದ್ದರು.

ಆದರೆ, ಸಚಿವರ ಸೂಚನೆ ಹೊರಬಿದ್ದಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಚಿವರ ಆದೇಶದ ಬಳಿಕವೂ ಕ್ರಮ ಜರುಗದಿರುವುದರ ಹಿಂದೆ ಯಾವ ಪ್ರಭಾವ ಅಥವಾ ಒತ್ತಡ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿರುವ ಗಂಭೀರ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯನ್ನು ಮಾತ್ರ ಅಮಾನತುಗೊಳಿಸಿ, ಇಲಾಖೆಯ ಮುಖ್ಯಸ್ಥರ ವಿರುದ್ಧ ಯಾವುದೇ ಹೊಣೆಗಾರಿಕೆ ನಿಗದಿಪಡಿಸದಿರುವುದು ಟೀಕೆಗೆ ಗುರಿಯಾಗಿದೆ. ಘಟನೆಯ ಸಂಪೂರ್ಣ ಹೊಣೆ ಯಾರ ಮೇಲಿದೆ ಎಂಬುದನ್ನು ಸ್ಪಷ್ಟಪಡಿಸಿ, ತಪ್ಪಿತಸ್ಥರ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ, ಅಗ್ನಿ ಅವಘಡಕ್ಕೆ ಸಂಬಂಧಿಸಿದ ತನಿಖೆ ಯಾವ ಹಂತದಲ್ಲಿದೆ, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

Key words: Mysuru, Fox Den Bar Fire, No Action Against, Excise DC, Even After a Week

SUMMARY: 

Mysuru Fox Den Bar Fire: No Action Against Excise DC Even After a Week

Mysuru: A week after the tragic fire at Fox Den Bar in Mara Restaurant, Dattagalli, which claimed two lives, no disciplinary action has been taken against Mysuru Excise Deputy Commissioner Nagarajappa, raising serious questions.

While a few Excise Department officials and Mysuru City Corporation staff have been suspended, no action against the district Excise chief has been made public. A police complaint has already been registered, and the investigation is underway.

District In-charge Minister Dr. Yathindra Siddaramaiah had visited the accident site and reportedly directed officials to recommend action against the Excise DC. However, no disciplinary action has been initiated so far.

The delay has sparked criticism, with many questioning why the minister’s directions have not been implemented and whether influential forces are shielding senior officials.