ಬೆಂಗಳೂರು,ಜೂನ್,24,2026 (www.justkannada.in): ತಂದೆ, ತಾಯಿ ಮತ್ತು ತಂಗಿ ಕೊಲೆಗೈದು ಪ್ರಿಯಕರನ ಜೊತೆ ಪರಾರಿಯಾಗಿದ್ದ ಯುವತಿಯನ್ನ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. 
ಶ್ವೇತಾ ಎಂಬಾಕೆಯೇ ಪ್ರೀತಿಯ ಹೆಸರಿನಲ್ಲಿ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಕೊಲೆ ಮಾಡಿ, ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಜೂನ್ 22ರಂದು ಪೂರ್ವ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಈ ಘಟನೆ ನಡೆದಿತ್ತು.
ತಂದೆ ಸೋಮಸುಂದರ್ (55), ತಾಯಿ ಮುತ್ತುಲಕ್ಷ್ಮಿ (48) ಮತ್ತು ತಂಗಿ ಸುಪ್ರಿಯಾ (20)ರನ್ನು ಕೊಲೆ ಮಾಡಿ ಶ್ವೇತ ಪರಾರಿಯಾಗಿದ್ದಳು. ಇದೀಗ ಯುವತಿ ಶ್ವೇತಾಳನ್ನ ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿದ್ದಾರೆ.
ಸೀಗೇಹಳ್ಳಿಯ ಧಾಮ್ನಿಕಾ ಲೇಔಟ್ ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್ಮೆಂಟ್’ನ ಫ್ಲ್ಯಾಟ್ ಒಂದರಲ್ಲಿ ಮೂರು ಶವಗಳು ಪತ್ತೆಯಾಗಿತ್ತು. ಮೃತ ದಂಪತಿಯ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನ್ನೆತ್ ಈ ಕೊಲೆ ಮಾಡಿ ಪರಾರಿಯಾಗಿದ್ದರು. ಕೃತ್ಯವೆಸಗಿ ಬಳಿಕ ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪಾಂಡಿಚೇರಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಪ್ರಿಯಕರ ಕೆನ್ನೆತ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
Key words: Young woman, arrested, murder, father, mother, sister






