ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದ ಕಳ್ಳ ಸ್ಥಳದಲ್ಲೇ ಸಾವು

ಬೆಂಗಳೂರು, ಜೂನ್​​,19,2026 (www.justkannada.in):  ಮೊಬೈಲ್ ಕದ್ದು ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ಖದೀಮ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುನೈದ್ ಎಂಬಾತ ಮೃತಪಟ್ಟ ಕಳ್ಳ. ಈತ ಮತ್ತು ಮತ್ತೋರ್ವ ಆರೋಪಿ ಅರ್ಬಾಜ್  ವ್ಯಕ್ತಿಯೋರ್ವರ ಮೊಬೈಲ್​​ ಕಸಿದು ಸ್ಕೂಟಿಯಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರ್ಮಿಕ  ಕಳ್ಳರ ಬೈಕ್  ಮೇಲೆ ಮೂಟೆಯನ್ನು ಎಸೆದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದ ಜುನೈದ್​​ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ.

ಆದರೆ ಫುಟ್​​ಪಾತ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೃದಯ ಸಂಬಂಧಿ ಸಮಸ್ಯೆಯಿಂದ ಜುನೈದ್ ಬಳಲುತ್ತಿದ್ದ ಎನ್ನಲಾಗಿದ್ದು, ಮತ್ತೋರ್ವ ಆರೋಪಿ ಅರ್ಬಾಜ್​​ನನ್ನು ಪೊಲೀಸರು  ಬಂಧಿಸಿದ್ದಾರೆ.

Key words: Thief, mobile phone, dies, on the spot