ಮೈಸೂರಿನಲ್ಲಿ ಮನೆ ಕಳ್ಳತನ: ಕಿಟಕಿ ಸರಳು ಮುರಿದು ನಗದು, ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು, ಜೂನ್, 13,2026 (www.justkannada.in):  ನಗರದ ದಟ್ಟಗಳ್ಳಿ ಪ್ರದೇಶದಲ್ಲಿ ಕಳ್ಳರು ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.

ದಟ್ಟಗಳ್ಳಿಯ 80 ಅಡಿ ರಸ್ತೆಯ ಸಮೀಪದ ಮಾಂಗಲ್ಯ ಸಂಗಮ ರಸ್ತೆಯಲ್ಲಿರುವ ನಿವಾಸದಲ್ಲಿ ಈ ಕಳ್ಳತನ ನಡೆದಿದ್ದು, ಮನೆಯವರು ಹೊರಗಡೆ ಹೋಗಿದ್ದ ವೇಳೆ ದರೋಡೆಕೋರರು ಈ  ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಮನೆಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯನ್ನು ಜಾಲಾಡಿ, ಅಲಮಾರಿಯಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನದ ನಿಖರ ಮೌಲ್ಯ ಇನ್ನೂ ತಿಳಿದುಬಂದಿಲ್ಲ.

ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪುನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿಯೂ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದರು.

ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

#Mysuru #TheftCase #Dattagalli #KuvempunagarPolice #HouseBurglary #CrimeNews #MysoreNews

ENGLISH SUMMARY..

House Burglary Reported in Mysuru

Mysuru, June 13: A house burglary was reported in Dattagalli area of Mysuru. The incident occurred at a residence on Mangalya Sangama Road near the 80 Feet Road.

Taking advantage of the house being unoccupied, burglars allegedly broke the window grills, entered the house, and stole cash and gold ornaments.

Officials from the Kuvempunagar Police visited the spot for investigation. Fingerprint experts and a dog squad were also deployed to collect evidence.

Police have registered a case and launched a search for the accused.

#Mysuru #HouseBurglary #CrimeNews #KuvempunagarPolice #Dattagalli #MysoreNews