ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು- ಮುಂದುವರೆದ ಸಚಿವ ಕೃಷ್ಣಭೈರೇಗೌಡರ ಅಸಮಾಧಾನ?

ಬೆಂಗಳೂರು,ಜೂನ್,13,2026 (www.justkannada.in): ಖಾತೆ ಹಂಚಿಕೆಯಾದರೂ ಸಚಿವರ ಮುನಿಸು ಮುಂದುವರೆದಿದ್ದು  ಈ ಮಧ್ಯೆ ಬೆಂಗಳೂರು ನಗರಾಭಿವೃದ್ದಿ ಖಾತೆ ನೀಡಿದರೂ ಬಿಡಿಎ, ಬಿಎಂಆರ್ ಡಿಎ ಜವಾಬ್ದಾರಿ ನೀಡದ ಹಿನ್ನೆಲೆಯಲ್ಲಿ ಸಚಿವ ಕೃಷ್ಣಭೈರೇಗೌಡರ ಅಸಮಾಧಾನ ಮುಂದುವರೆದಿದೆ ಎನ್ನಲಾಗಿದೆ.

ಈ ಬಗ್ಗೆ ಇಂದು ಮಾತನಾಡಿದ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ, ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇರಬೇಕು.  ಸ್ಪಷ್ಟತೆ ಇದ್ದರೆ ಉತ್ತಮವಾಗಿ ಕೆಲಸ ಮಾಡಬಹುದು. ಇಲ್ಲದಿದ್ದರೇ ನಿರೀಕ್ಷೆ ಮುಟ್ಟಲು ಆಗಲ್ಲ.  ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಬೆಂಗಳೂರು ನಗರಾಭಿವೃದ್ದಿ ಖಾತೆಯ ಜೊತೆ ಬಿಡಿಎ ಬಿಎಂಆರ್ ಡಿಎ ನೀಡುವಂತೆ  ಸಚಿವ ಕೃಷ್ಣೇಭೈರೇಗೌಡರು ಡಿಮ್ಯಾಂಡ್ ಮಾಡಿದ್ದು ಈ ವಿಚಾರದ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಖಾತೆ ವಹಿಸಿಕೊಳ್ಳದರಿಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Key words: clarity, responsibility, Minister, Krishna Bhairegowda, dissatisfaction