Saturday, September 12, 2026

BDA Apartments

ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ: ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ BDA JK_Ad...
Home Front Page ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ: ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ

ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ: ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ

ಬೆಂಗಳೂರು,ಜೂನ್,12,2026 (www.justkannada.in):  ಬಿಡದಿ ಟೌನ್ ಶಿಪ್ ಗೆ ಇದೀಗ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದ್ದು  ಟೌನ್ ಶಿಪ್ ಗೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  2006ರಲ್ಲಿ ಐದು ಟೌನ್ ಶಿಪ್ ಮಾಡಬೇಕೆಂದು ನಿರ್ಧಾರ ಮಾಡಿದ್ದೆ.ಇದಕ್ಕೆ ರೈತರು ವಿರೋಧ ಮಾಡಿದ್ದರಿಂದ ಯೋಜನೆ ಸ್ಥಗಿತಗೊಳಿಸಿದೆ.  ರೈತರ ಭಾವನೆಗೆ ಬೆಲೆಕೊಟ್ಟು ಸ್ಥಗಿತ ಮಾಡಿದೆ.  ಇದೀಘ ಸರ್ಕಾರ ಅಂತಿಮ ನೋಟಿಫಿಕೇಷನ್ ಹೊರಡಿಸಿದೆ.ಬಿಡದಿ ಟೌನ್ ಶಿಪ್ ಗೆ ಅಧಿಸೂಚನೆ bidadi

ಟೌನ್ ಶಿಪ್ ವಿರೋಧಿಸಿ 470 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಹೊರಟಿರುವ ರೈತರ ಮೇಲೆ ಎಫ್ ಐಆರ್ ಹಾಕುತ್ತಿದ್ದಾರೆ.  ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ.  ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಜನಪ್ರತಿನಿಧಿಗಳು ಸೇರಿಕೊಂಡಿದ್ದಾರೆ ಎಂದು  ಹೆಚ್ ಡಿಕೆ ಕಿಡಿ ಕಾರಿದರು.ಸರ್ಕಾರದ ವಿರುದ್ದ ಕೇಂದ್ರ ಸಚಿವ HDK ಕಿಡಿ jk02_new jk02 new

Key words: Notification, Bidadi, Township, Union Minister, HDK