Saturday, September 12, 2026

BDA Apartments

ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ BDA JK_Adv BDA Adv
Home Front Page ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ

ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ

ಬೆಂಗಳೂರು, ಜೂನ್, 12,2026 (www.justkannada.in): ರಾಜ್ಯ ಸರ್ಕಾರವು  ಬಿಡದಿ ಟೌನ್ ಶಿಪ್‌ ಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ರೈತರ ವಿರೋಧದ ನಡುವೆಯೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 519 ಎಕರೆ ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ.  ಮೊದಲ ಹಂತದ ಭೂ ಸ್ವಾಧೀನ ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದ್ದು, ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ.ಅಥವಾ ಶೇ.50ರಷ್ಟು ಅಭಿವೃದ್ಧಿ ಪಡಿಸಿರುವ ಭೂಮಿ ನೀಡಲು ಆದೇಶಿಸಲಾಗಿದೆ.ಬಿಡದಿ ಟೌನ್​ ಶಿಪ್​​​ ಗೆ​ ಅಂತಿಮ ಅಧಿಸೂಚನೆ ಪ್ರಕಟಿಸಿದ ಸರ್ಕಾರ vidhan

ಕೆಂಪಯ್ಯನಪಾಳ್ಯದ 384 ಎಕರೆ 22 ಗುಂಟೆ, ಮಂಡಲಹಳ್ಳಿಯ 71 ಎಕರೆ 13 ಗುಂಟೆ ಹಾಗೂ ವಡೇರಹಳ್ಳಿಯ 63 ಎಕರೆ 10 ಗುಂಟೆ ಭೂಸ್ವಾಧೀನಕ್ಕೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ.ಮನಗರ BDA JK_Adv BDA Adv

ಸರ್ಕಾರವು ಒಟ್ಟು 754 ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು. ಈ ರೈತರಿಗೆ ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸೂಚಿಸಲಾಗಿದೆ.2026 www justkannada jk02_new jk02 new

Key words: Government, final notification, Bidadi, Township