ಉಡುಪಿ,ಜೂನ್,11,2026 (www.justkannada.in): ತಾಯಿಯ ಮಡಿಲಲ್ಲಿದ್ದಾಗಲೇ ಅಚಾನಕ್ ಆಗಿ ಒಂದುವರೆ ವರ್ಷದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಚಾಂತಾರು ಹೆರಂಜಾಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದುವರೆ ವರ್ಷದ ಮಗು ತಾಯಿಯ ಮಡಿಲಲ್ಲಿರುವಾಗಲೇ ತೆಂಗಿನ ಕಾಯಿ ಮಗುವಿನ ತಲೆ ಮೇಲೆ ಅಚಾನಕ್ ಆಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಸ್ಥಳೀಯರ ನೆರವಿನಿಂದ ಮಗುವನ್ನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶಸ್ತ್ರಚಿಕಿತ್ಸೆ ನಡೆದರೂ ಸಹ ಕಂದಮ್ಮ ಬದುಕುಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
Key words: Baby, dies, falling, coconut, Udupi






