ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ: ಸರ್ಕಾರಿ ನೌಕರನಿಗೆ 83.82 ಲಕ್ಷ ರೂ. ಪಂಗನಾಮ

ಬಾಗಲಕೋಟೆ, ಜೂ.9,2026 (www.justkannada.in): ‘ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ಚೋರರು ಸರ್ಕಾರಿ ನೌಕರರೊಬ್ಬರ ಬಳಿ 83.82 ಲಕ್ಷ ರೂ. ದೋಚಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಚೇರಿಯ ಹಿರಿಯ ಟೈಪಿಸ್ಟ್‌ ಹೆಚ್.ವಿ. ಸುರೇಶ್ ರಾವ್ (59) ವಂಚನೆಗೊಳಗಾದ ವ್ಯಕ್ತಿ. ನಕಲಿ ಪೊಲೀಸ್ ಠಾಣೆ, ನಕಲಿ ವಕೀಲರು ಹಾಗೂ ನಕಲಿ ಜಡ್ಜ್ ಸೃಷ್ಟಿಸಿ ಬೆದರಿಕೆ ಹಾಕಿದ ವಂಚಕರ ಗ್ಯಾಂಗ್, ಅವರಿಂದ ಬರೋಬ್ಬರಿ 83.22 ಲಕ್ಷ ರೂ. ಸುಲಿಗೆ ಮಾಡಿದೆ. ಈ ಸಂಬಂಧ ಬಾಗಲಕೋಟೆ ಸಿಇಎನ್ (CEN) ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ರಾವ್ ಅವರಿಗೆ ವಂಚಕರ ಗ್ಯಾಂಗ್ ವಿವಿಧ ನಂಬರ್‌ಗಳಿಂದ ಕರೆ ಮಾಡಿ, ತಾವು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ನಂಬಿಸಿ. “ನಿಮ್ಮ ಆಧಾರ್ ಕಾರ್ಡ್ ಬಳಸಿ ಖರೀದಿಸಲಾದ ಸಿಮ್ ಕಾರ್ಡ್ ಒಂದರಿಂದ ಸಾರ್ವಜನಿಕರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಮುಂಬೈ ಕ್ರೈಂ ಬ್ರ್ಯಾಂಚ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ” ಎಂದು  ಬೆದರಿಕೆ ಹಾಕಿದ್ದರು. ಅಲ್ಲದೆ ಈ ಕೇಸ್​​​​​​ ಕೈಬಿಡಲು ಮತ್ತು ಎಫ್‌ಐಆರ್ ರದ್ದುಪಡಿಸಲು ಹಣವನ್ನು ಹಾಕಿಸಿಕೊಂಡಿದ್ದರು.

ಇದಾದ ನಂತರ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಲಿಯರ್ ಮಾಡಲು ಕ್ರಿಪ್ಟೋ ಕರೆನ್ಸಿ ಖರೀದಿಸಿ ಅಮೆರಿಕನ್ ಡಾಲರ್‌ಗೆ ಕನ್ವರ್ಟ್ ಮಾಡಬೇಕು ಎಂದು ನಂಬಿಸಿದ್ದರು. ಇದನ್ನು ನಂಬಿದ ನೌಕರ ಸುರೇಶ್ ರಾವ್, ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ಬೆಳಗಾವಿ ಮೂಲದ ಶಂಕರ್ ಶಿಂಧೆ ಎಂಬುವವರಿಂದ 38 ಲಕ್ಷ ರೂಪಾಯಿ ಮೌಲ್ಯದ ಯುಎಸ್‌ ಡಿಟಿ ಡಾಲರ್ ಖರೀದಿಸಿ ವಂಚಕರ ಖಾತೆಗೆ ವರ್ಗಾಯಿಸಿದ್ದರು.

ಬಳಿಕ ತಾವು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆಯಾಗಿರುವುದು ಸುರೇಶ್ ರಾವ್ ಅವರಿಗೆ ತಿಳಿದಿದ್ದು. ಈ ಕುರಿತು, ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Key words: Fraud, Digital Arrest, Government employee