ಬೆಂಗಳೂರು,ಜೂನ್,4,2026 (www.justkannada.in): ಸಿಎಂ ಬದಲಾವಣೆ ಆಗುವುದಿಲ್ಲ ಎಂಬ ನಿರೀಕ್ಷೆ ಇತ್ತು. ಅದರೆ ಹೈಕಮಾಂಡ್ ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಒಪ್ಪಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಸಿಎಂ ಬದಲಾವಣೆ ಆಗಲ್ಲ ಎಂದಿದ್ದೆ ಅಂತಿಮವಾಗಿ ಹೈಕಮಾಂಡ್ ನಿರ್ಧರಿಸುತ್ತೆ ಎಂದಿದ್ದೆ. ಸಿದ್ದರಾಮಯ್ಯ ಸಹ ಹೈಕಮಾಂಡ್ ಹೇಳಿದಂತೆ ನಡೆಯುವುದಾಗಿ ತಿಳಿಸಿದ್ದರು. ಸಿಎಂ ಬದಲಾವಣೆ ಆಗುವುದಿಲ್ಲ ಎಂಬ ನಿರೀಕ್ಷೆ ಇತ್ತು. ಅದರೆ ಹೈಕಮಾಂಡ್ ಕೈಗೊಂಡ ನಿರ್ಧಾರವನ್ನು ಎಲ್ಲರೂ ಒಪ್ಪಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಯೇ ಅಹಿಂದ ಅಹಿಂದ ಮತ ಒಗ್ಗೂಡುವಿಕೆ ಆಧಾರದಲ್ಲಿ ಕಾಂಗ್ರೆಸ್ ಭವಿಷ್ಯವಿದೆ. ಅಹಿಂದ ವರ್ಗ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ನಡೆಯುತ್ತೆ. ಅದರ ಆಧಾರದ ಮೇಲೆ ಪಕ್ಷದ ಭವಿಷ್ಯ ತೀರ್ಮಾನವಾಗುತ್ತೆ ಎಂದರು.
ಪರಿಷತ್ 4 ಸ್ಥಾನ ಹಿಂದುಳಿದ ವರ್ಗಕ್ಕೆ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆಎನ್ ರಾಜಣ್ಣ, ಹೈಕಮಾಂಡ್ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ . ಪರಿಷತ್ ನಾಲ್ಕು ಸ್ಥಾನಗಳನ್ನ ಎಲ್ಲರೂ ಹಂಚಿಕೊಂಡಿದ್ದಾರೆ ಬಿಕೆ ಹರಿಪ್ರಸಾದ್ ಆಯ್ಕೆ ಅವರ ಸ್ವಂತದ್ದು. ತಿಪ್ಪಣ್ಣಪ್ಪ ಆಯ್ಕೆ ಎಐಸಿಸಿ ಅಧ್ಯಕ್ಷರದ್ದು. ಪಿವಿ ಮೋಹನ್ ಆಯ್ಕೆ. ಕೆಸಿ ವೇಣುಗೋಪಾಲ್ ರದ್ದು. ಶಿವಣ್ಣ ಮಳವಳ್ಳಿ ಆಯ್ಕೆ ಮುಖ್ಯಮಂತ್ರಿಯದ್ದಾಗಿದೆ ಎಲ್ಲವನ್ನೂ ಹಂಚಿಕೊಂಡಿ ಬಿಟ್ಟಿದ್ದಾರೆ ಎಂದರು.
Key words: CM change, high command, decision, K.N. Rajanna






