Wednesday, September 9, 2026

BDA Apartments

Home Front Page ನಾನು ಯಾವ ಹುದ್ದೆ ಕೇಳಿಲ್ಲ: ದೆಹಲಿಗೂ ಹೋಗಲ್ಲ- ಯು.ಟಿ ಖಾದರ್

ನಾನು ಯಾವ ಹುದ್ದೆ ಕೇಳಿಲ್ಲ: ದೆಹಲಿಗೂ ಹೋಗಲ್ಲ- ಯು.ಟಿ ಖಾದರ್

ಬೆಂಗಳೂರು,ಜೂನ್,1,2026 (www.justkannada.in): ನಾನು ಎಲ್ಲಾ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ನಾನು ಯಾವ ಹುದ್ದೆ ಕೇಳಿಲ್ಲ: ದೆಹಲಿಗೂ ಹೋಗಲ್ಲ ಎಂದು ಮಾಜಿ ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಶಾಸಕರ ಲಾಬಿ ವಿಚಾರ ಕುರಿತು ಮಾತನಾಡಿದ ಯು.ಟಿ ಖಾದರ್,  ಸಾಮಾಜಿಕ ಜಾಲತಾಣ ನೋಡಿ ಅಧಿಕಾರ ಕೊಡಲ್ಲ ನಮ್ಮ ಕಾರ್ಯವೈಖರಿ ನೋಡಿ ಅಧಿಕಾರ ಕೊಡ್ತಾರೆ. ನಾನು ಎಲ್ಲಾ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ.  ನನ್ನ ಸ್ಪೀಕರ್ ಕೆಲಸ ನೋಡಿ ಏನು ಜವಾಬ್ದಾರಿ ಕೊಡ್ತಾರೆ ಗೊತ್ತಿಲ್ಲ.  ನಾಣು ಯಾವ ಹುದ್ದೆ ಕೇಳಿಲ್ಲ.  ದೆಹಲಿಗೆ ಹೋಗಲ್ಲ. ಡಿಸಿಎಂ ಹುದ್ದೆ ಸೃಷ್ಠಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

ಸಚಿವ ಸ್ಥಾನ ಕೇಳಲು ನಾನು ದೆಹಲಿಗೆ ಹೋಗುತ್ತಿಲ್ಲ. ನನ್ನ ಕೆಲಸ ನೋಢಿ ಯಾವ ಜವಾಬ್ದಾರಿ ಕೊಡುತ್ತಾರೋ?  ಈ ಹಿಂದೆ ಸದನದ ಉಪನಾಯಕ ಸ್ಪೀಕರ್ ಆಗಿ ಕೆಲಸ ಮಾಡಿದ್ದೇನೆ.  ಈಗ ಯಾವ ಜವಾಬ್ದಾರಿ ಕೊಟ್ಟರು ನಿರ್ವಹಿಸುತ್ತೇನೆ ಎಂದು ಯುಟಿ ಖಾದರ್ ತಿಳಿಸಿದ್ದಾರೆ.

Key words: Ministerial Position, not, asked, any post, U.T. Khader