ಡಿಕೆಶಿ ಸಂಪುಟದಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸ್ಥಾನ ನೀಡಿ- ಶಾಸಕ ಹರೀಶ್  ಗೌಡ ಒತ್ತಾಯ

ಮೈಸೂರು,ಜೂನ್,1,2026 (www.justkannada.in): ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು ಜೂನ್ 3 ರಂದು ಡಿಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಲಿದೆ.  ಈ ಮಧ್ಯೆ ಹೊಸ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಸ್ಥಾನ ನೀಡುವಂತೆ  ಒತ್ತಾಯ ಕೇಳಿಬಂದಿದೆ.

ಯತೀಂದ್ರ ಸಿದ್ದರಾಮಯ್ಯಗೆ  ಮಂತ್ರಿಸ್ಥಾನ ನೀಡುರವಂತೆ ಶಾಸಕ ಕೆ.ಹರೀಶ್ ಗೌಡ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು,  ಸಿಎಂಸ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.  ಹೀಗಾಗಿ ಡಿಕೆ ಶಿವಕುಮಾರ್ ಮಂತ್ರಿಮಂಡಲದಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ ನೀಡಿ ಮೈಸೂರು  ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Key words: MLA,Harish Gowda , Yathindra Siddaramaiah , DKS, cabinet.