ಬೆಂಗಳೂರು,ಜೂನ್,1,2026 (www.justkannada.in): ಜೂನ್ 3 ರಂದು ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು ಈ ನಡುವೆ ಹೊಸ ಸಂಪುಟ ಸೇರಲು ಶಾಸಕರ ಲಾಬಿ ಜೋರಾಗಿದೆ. ಈ ಮಧ್ಯೆ ಶಾಸಕ ಶಿವಲಿಂಗೇಗೌಡ ತಮಗೂ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಶಿವಲಿಂಗೇಗೌಡ, ನಾನು ಕಾಂಗ್ರೆಸ್ ಗೆ ಬಂದಾಗಲೇ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಹಿಂದೆ ಸಚಿವ ಸ್ಥಾನ ಸಿಗಲಿಲ್ಲ. ಈಗ ಡಿಕೆ ಶಿವಕುಮಾರ್ ಸಂಫುಟದಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಶಾಸಕ ಶಿವಲಿಂಗೇಗೌಡ ಅವರು ನವದೆಹಲಿಗೆ ತೆರಳಿದ್ದು ತಮಗೂ ಮಂತ್ರಿ ಸ್ಥಾನ ನೀಡುವಂತೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಒತ್ತಡ ಹಾಕಲಿದ್ದಾರೆ.
Key words: MLA, Shivalingegowda, confident , cabinet







