Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ಬಿಡದಿ ಟೌನ್ ​ಶಿಪ್: ಭೂಸ್ವಾಧೀನಕ್ಕೆ 2ನೇ ಹಂತದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ

ಬಿಡದಿ ಟೌನ್ ​ಶಿಪ್: ಭೂಸ್ವಾಧೀನಕ್ಕೆ 2ನೇ ಹಂತದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ

ರಾಮನಗರ,ಜುಲೈ,15,2026 (www.justkannada.in): ಬಿಡದಿ ಟೌನ್ ​ಶಿಪ್ ನಿರ್ಮಾಣ ಸಂಬಂಧ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ 2ನೇ ಹಂತದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಬಿಡದಿ ಹೋಬಳಿಯ ಪ್ರಮುಖ ಮೂರು ಗ್ರಾಮಗಳ ಒಟ್ಟು 2,550 ಎಕರೆ ಜಮೀನನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಭೂಸ್ವಾಧೀನಕ್ಕೊಳಪಟ್ಟ ಗ್ರಾಮಗಳು ಮತ್ತು ವಿಸ್ತೀರ್ಣದ ವಿವರ

ಬನ್ನಿಗಿರಿ ಗ್ರಾಮ: ಒಟ್ಟು 775 ಎಕರೆ 6 ಗುಂಟೆ (ಇದರಲ್ಲಿ 99 ಎಕರೆ ಕರಾಬು ಜಮೀನು ಸೇರಿದೆ).

ಅರಳಾಳುಸಂದ್ರ: ಒಟ್ಟು 1,460 ಎಕರೆ 21 ಗುಂಟೆ (ಇದರಲ್ಲಿ 30 ಎಕರೆ ಕರಾಬು ಜಮೀನು ಸೇರಿದೆ).

ಕೆಜಿ ಗೊಲ್ಲರಪಾಳ್ಯ: ಒಟ್ಟು 315 ಎಕರೆ (ಇದರಲ್ಲಿ 5 ಎಕರೆ ಕರಾಬು ಜಮೀನು ಸೇರಿದೆ).ಬಿಡದಿ ಟೌನ್ ​ಶಿಪ್ jk02_new jk02 new

ಬಿಡದಿ ಟೌನ್​ಶಿಪ್​​​ ಯೋಜನೆ  ವಿವಾದದ ಕಾವು ಜೋರಾಗಿದ್ದು  ಎರಡ್ಮೂರು ದಿನಗಳ ಹಿಂದೆ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿ ಕಲ್ಲು ತೂರಿ ಕಾರು ಜಖಂ ಗೊಳಿಸಿದ್ದರು.

Key words: Bidadi Township, Government, final notification, land acquisition