Monday, September 7, 2026

BDA Apartments

Home Front Page ಸಚಿವರಾಗಿ ಮುಂದುವರೆಸುವಂತೆ ವರಿಷ್ಠರಿಗೆ ಮನವಿ- ಎಂ.ಸಿ ಸುಧಾಕರ್

ಸಚಿವರಾಗಿ ಮುಂದುವರೆಸುವಂತೆ ವರಿಷ್ಠರಿಗೆ ಮನವಿ- ಎಂ.ಸಿ ಸುಧಾಕರ್

ನವದೆಹಲಿ,ಜೂನ್,1,2026 (www.justkannada.in):  ಸಚಿವರಾಗಿ ಮುಂದುವರೆಸುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಎಂ.ಸಿ ಸುಧಾಕರ್ ತಿಳಿಸಿದರು.

ಹೊಸಸಚಿವ ಸಂಪುಟ ಸೇರ್ಪಡೆಯಾಗಲು ಕಾಂಗ್ರೆಸ್ ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದರೇ ಅತ್ತ  ಹಿಂದಿನ ಸಚಿವರು ತಮ್ಮ ಮಂತ್ರಿಗಿರಿ ಉಳಿಸಿಕೊಳ್ಳಲು ಸರ್ಕಸ್ ನಡೆಸುತ್ತಿದ್ದಾರೆ.  ಈ ಕುರಿತು ಮಾತನಾಡಿರುವ ಎಂ.ಸಿ ಸುಧಾಕರ್  ಈ ಹಿಂದೆ ನಾನು 3 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ.  ಹೀಗಾಗಿ ನನ್ನನ್ನು ಸಚಿವರಾಗಿ ಮುಂದುರೆಸುವಂತೆ ಮನವಿ  ಮಾಡಲು ಬಂದಿದ್ದೇನೆ  ಎಂದರು.

ಶಾಶಕ ಜಮೀರ್ ಅಹ್ಮದ್ ಖಾನ್ ಆಡಿಯೋ ಬಗ್ಗೆ ಗೊತ್ತಿಲ್ಲ  ಅದರ ನೈಜತೆ ಪರಿಶೀಲಿಸಬೇಕುಈ  ಹಿಂದೆ ನನಗೂ ಹೀಗೆ ಆಗಿತ್ತು.  ಕೆಲವೊಮ್ಮ ತೇಜೋವಧೆ ಮಾಡಲು ಪ್ರಯತ್ನ ಮಾಡಬಹುದು.  ಎಐ ಕಾಲದಲ್ಲಿ ಆಡಿಯೋ ವಿಡಿಯೋ ಬಗ್ಗೆ ಎಚ್ಚರವಿರಲಿ ಎಂದು ಎಂಸಿ ಸುಧಾಕರ್ ತಿಳಿಸಿದರು.

Key words:  request , continue, minister Position, M.C. Sudhakar