Wednesday, September 30, 2026

BDA Apartments

Home Front Page ರಾಹುಲ್ ಯುದ್ದಕ್ಕೂ ಮೊದಲೇ ಎಚ್ಚರಿಸಿದ್ದರು: ಆದ್ರೆ ಗಮನ ಕೊಡಲಿಲ್ಲ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  

ರಾಹುಲ್ ಯುದ್ದಕ್ಕೂ ಮೊದಲೇ ಎಚ್ಚರಿಸಿದ್ದರು: ಆದ್ರೆ ಗಮನ ಕೊಡಲಿಲ್ಲ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  

ಉಡುಪಿ,ಮೇ,16,2026 (www.justkannada.in):   ದೇಶದ ಅರ್ಥ ವ್ಯವಸ್ಥೆ ಹಾಳಾಗುತ್ತೆ ಎಂದು 6 ತಿಂಗಳ ಮೊದಲೇ ಯುದ್ದಕ್ಕೂ ಮೊದಲೇ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು. ಆದರೆ ಅದರ ಬಗ್ಗೆ ಗಮನ ಕೊಡಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಧಾನಿಗಳು ಈ ದೇಶದ ಅರ್ಥ ವ್ಯವಸ್ಥೆಯ ಮುಖ್ಯಸ್ಥರು ಅರ್ಥ ವ್ಯವಸ್ಥೆ ಹದಗೆಡುತ್ತೆ ಎಂದು ರಾಹುಲ್ ಗಾಂಧಿ ಮೊದಲೇ ಹೇಳಿದ್ದರು.  6 ತಿಂಗಳ ಮೊದಲೇ ಎಚ್ಚರಿಕೆ ಕೊಟ್ಟಿದ್ದರು ಯುದ್ದಕ್ಕೂ ಮೊದಲೇ ಕರೆ ಕೊಟ್ಟಿದ್ದರು.  ಆದರೆ ಗಮನ ಕೊಡಲಿಲ್ಲ.  ಈಗ ಮೋದಿ ಅವರು  ಕರೆ ಕೊಟ್ಟಿದ್ದಾರೆ. ನಮ್ಮ ಇತಿಮಿತಿಯಲ್ಲಿ ದೇಶಕ್ಕೋಸ್ಕರ ಬಳಸೋಣ  ಎಂದರು.ರಾಹುಲ್ ಯುದ್ದಕ್ಕೂ ಮೊದಲೇ ಎಚ್ಚರಿಸಿದ್ದರು modi-rahul gandhi modi rahul gandhi

ದೇಶಕ್ಕೆ ಯಾಕೆ ಇಂತಹ ಪರಿಸ್ಥಿತಿ ಬಂತು ಎಂಬ ಬಗ್ಗೆ ಚರ್ಚೆ ಆಗಲಿ. ಮೋದಿ ಘಂಟೆ ಬಾರಿಸಬೇಕು ಅಂದ್ರೆ ಜನ ಘಂಟೆ ಬಾರಿಸಬೇಕು, ಮೋದಿ ಚಪ್ಪಾಳೆ ತಟ್ಟಬೇಕು ಅಂದರೆ ತಟ್ಟಬೇಕು ತೈಲ ಬಳಶಬೇಡಿ ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರೆ.  ಮೋದಿ ನಮಗೆ ಬರೀ ಹೇಳೋದೆ ಆಯ್ತು  ಆದರೆ ಇವರೇನು ಮಾಡುತ್ತಿದ್ದಾರೆ ಅನ್ನೋದು ಮುಖ್ಯ  ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.ಆದ್ರೆ ಗಮನ ಕೊಡಲಿಲ್ಲ jk02

Key words: Rahul Gandhi, PM, Mpodi, Minister, Lakshmi Hebbalkar