Wednesday, September 30, 2026

BDA Apartments

ನೀಟ್ ರದ್ದು ಹಿನ್ನೆಲೆ : ಮೂವರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣು BDA JK_Adv BDA Adv
Home Crime ನೀಟ್  ರದ್ದು ಹಿನ್ನೆಲೆ : ಮೂವರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣು

ನೀಟ್  ರದ್ದು ಹಿನ್ನೆಲೆ : ಮೂವರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣು

ನವದೆಹಲಿ,ಮೇ,16,2026 (www.justkannada.in):  ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ  ಸೋರಿಕೆಯಾದ ಹಿನ್ನೆಲೆ ನೀಟ್ ಪರೀಕ್ಷೆಯನ್ನು ರದ್ದು ಮಾಡಿದ್ದಕ್ಕೆ ಮೂವರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶ, ದೆಹಲಿ, ರಾಜಸ್ತಾನಗಳಲ್ಲಿ ಮೂವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.  ಉತ್ತರ ಪ್ರದೇಶದಲ್ಲಿ ನೀಟ್ ಆಕಾಂಕ್ಷಿ 21 ವರ್ಷದ ರಿತಿಕ್ ಮಿಶ್ರಾ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಖೀಂಪುರ ಬೀದಿಯ ಮನೆಯ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.  ಈ ವರ್ಷ ಮೂರನೇ ಬಾರಿಗೆ ರಿತಿಕ್ ನೀಟ್ ಪರೀಕ್ಷೆ ಬರೆದಿದ್ದರು. ಈ ಬಾರಿ ಪಾಸ್ ಆಗಿ ತಾನು ವೈದ್ಯನಾಗುವ ವಿಶ್ವಾಸದಲ್ಲಿದ್ದರು.

ರಾಜಸ್ಥಾನದಲ್ಲಿ ನೀಟ್ ಆಕಾಂಕ್ಷಿ ಪ್ರದೀಪ್ ಮಹೀಚ್ ಎಂಬಾತ ಜುಂಜುನು ಜಿಲ್ಲೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಬಾರಿ ನೀಟ್ ನಲ್ಲಿ 650 ಅಂಕಗಳನ್ನು ಪಡೆಯುವ ನಿರೀಕ್ಷೆಯಲ್ಲಿ ಪ್ರದೀಪ್ ಇದ್ದರು ಎನ್ನಲಾಗಿದೆ.ನೀಟ್ ರದ್ದು ಹಿನ್ನೆಲೆ NEET

ಹಾಗೆಯೇ ದೆಹಲಿಯಲ್ಲಿ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯ ಆದರ್ಶ್ ನಗರದಲ್ಲಿ ವಿದ್ಯಾರ್ಥಿನಿ ಅನಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಕಾ 2024, 2025, 2026ರಲ್ಲಿ ನೀಟ್ ಪರೀಕ್ಷೆ ಬರೆದಿದ್ದರು.ಮೂವರು ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣು jk02_new jk02 new

Key words: NEET, cancellation, Three aspirants, commit, suicide