Wednesday, September 30, 2026

BDA Apartments

Home Front Page ಇದು ಜಿಗಣೆ ಸರ್ಕಾರ: ಜನರಿಗೆ ಮಾಡಿದ ಮೋಸವೇ ಸಾಧನೆನಾ?  ಛಲವಾದಿ ನಾರಾಯಣಸ್ವಾಮಿ ಕಿಡಿ

ಇದು ಜಿಗಣೆ ಸರ್ಕಾರ: ಜನರಿಗೆ ಮಾಡಿದ ಮೋಸವೇ ಸಾಧನೆನಾ?  ಛಲವಾದಿ ನಾರಾಯಣಸ್ವಾಮಿ ಕಿಡಿ

ಚಿಕ್ಕಮಗಳೂರು,ಮೇ,16,2026 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಾಧನಾ ಸಮಾವೇಶ ಆಯೋಜಿಸಿರುವುದಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಆಕ್ಷೇಪಿಸಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಒಂದು ರೀತಿ ಜಿಗಣೆ ಇದ್ದಂತೆ. ಜಿಗಣೆ ಸರ್ಕಾರ.  ಸಿದ್ದರಾಮಯ್ಯ ಸಿಎಂ ಆದ ದಿನದಿಂದ  ಅವರು ಸಿಎಂ ಸ್ಥಾನದಿಂದ ಹೋಗ್ತಾರೆ ಅಂತಾ ಇದ್ದಾರೆ. ಇವರು ಯಾವ ಸಾಧನೆ ಮಾಡಿದ್ದಾರೆ ಜನರಿಗೆ ಮಾಡಿದ ಮೋಸದ ಸಾಧನೆನಾ? ಎಂದು ಟೀಕಿಸಿದರು.

ಅಭಿವೃದ್ದಿ ಮಾಡೇ ಇಲ್ಲ. ಅಭಿವೃದ್ದಿ ಶೂನ್ಯ ಬಡವರ ರಕ್ತ ಹೀರುವ ಸರ್ಕಾರ. ತುಂಬ ದಿನ ಇದರ ಆಯಸ್ಸು ಇರಲ್ಲ ಎಂದು  ಛಲವಾದಿ ನಾರಾಯಣಸ್ವಾಮಿ  ಗುಡುಗಿದರು.ಇದು ಜಿಗಣೆ ಸರ್ಕಾರ jk02_new jk02 new

Key words: government, cheating, people, achievement, Chalavadi Narayanaswamy