Wednesday, September 30, 2026

BDA Apartments

Home Front Page ದೇಶವಾಳಲು ಮೋದಿಗೆ ಆಗಲ್ಲ: ಆರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಮಾಡಲಿ- ಬಸವರಾಜ ರಾಯರೆಡ್ಡಿ

ದೇಶವಾಳಲು ಮೋದಿಗೆ ಆಗಲ್ಲ: ಆರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಮಾಡಲಿ- ಬಸವರಾಜ ರಾಯರೆಡ್ಡಿ

ಕೊಪ್ಪಳ,ಮೇ,16,2026 (www.justkannada.in): ಪ್ರಧಾನಿ ನರೇಂದ್ರ ಮೋದಿಗೆ ದೇಶವಾಳಲು ಆಗುವುದಿಲ್ಲ. ಹೀಗಾಗಿ ಯಾರಾದರೂ ಅರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಆಗಿ ಮಾಡಲಿ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳಕ್ಕೆ ಯುದ್ದ ಕಾರಣ ಅಲ್ಲ. ಯುದ್ದಕ್ಕೂ ದರ ಹೆಚ್ಚಳಕ್ಕೂ ಸಂಬಂಧವೇ ಇಲ್ಲ ಆರ್ಥಿಕ ಹಿನ್ನೆಡೆಯಿಂದ ದರ ಹೆಚ್ಚಳ.  ಮೋದಿಗೆ ನೈತಿಕತೆ ಇಲ್ಲ. ದೇಶ ನಡೆಸಲು ಆಗುವುದಿಲ್ಲ ರಾಜೀನಾಮೆ ಕೊಟ್ಟು ಬೇರೆ ಯಾರಿಗೂದರೂ ಪಿಎಂ ಸ್ಥಾನ ನೀಡಲಿ  ಎಂದು ಒತ್ತಾಯಿಸಿದರು.

ಬರೀ ಹಿಂದುತ್ವ ಪರ ಇದ್ದವರನ್ನೇ ಮೋದಿ ಜೊತೆಗೆ ಇಟ್ಟುಕೊಂಡಿದ್ದಾರೆ. ಆರ್ಥಿಕ ತಜ್ಞರು ಇವರ ಬಳಿ ಇಲ್ಲ. ಎಲ್ಲರೂ ಬಿಟ್ಟು ಹೋಗಿದ್ದಾರೆ.  ಮೋದಿಗೆ ದೇಶ ಆಳುವುದಕ್ಕೆ ಬರಲ್ಲ. ಯಾರಾದರೂ ಅರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಆಗಿ ಮಾಡಲಿ  ಎಂದು  ಬಸವರಾಜ ರಾಯರೆಡ್ಡಿ ತಿಳಿಸಿದರು.ದೇಶವಾಳಲು ಮೋದಿಗೆ ಆಗಲ್ಲ jk02

Key words: Modi, not capable, ruling, country, MLA, Basavaraja Rayareddy