Sunday, August 9, 2026

BDA Apartments

Home Front Page ನಾನು ರೈತನ ಮಗ, ಹೊಲ ಉಳೋದು, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು- ಲಕ್ಷ್ಮಣ್ ಸವದಿ ಪರೋಕ್ಷ ಟಾಂಗ್

ನಾನು ರೈತನ ಮಗ, ಹೊಲ ಉಳೋದು, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು- ಲಕ್ಷ್ಮಣ್ ಸವದಿ ಪರೋಕ್ಷ ಟಾಂಗ್

ಬೆಳಗಾವಿ,ಮೇ,11,2026 (www.justkannada.in): ನಾನು ಹಳ್ಳಿಯಲ್ಲಿ ಬೆಳೆದು ಕನ್ನಡ ಮಾಧ್ಯಮದಲ್ಲಿ ಓದಿದವನು. ರೈತನ ಮಗ. ಹೊಲ ಉಳುಮೆ ಮಾಡೋದೂ ಗೊತ್ತು, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು. ಹಾಗೆಯೇ ಅನ್ಯಾಯ ಮಾಡಲು ಬಂದರೆ ಅದಕ್ಕೆ ತಕ್ಕ ತಿರುಗೇಟು ನೀಡುವುದು ಗೊತ್ತು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ನಾನು ಐಎಎಸ್,  ಐಪಿಎಸ್ ಕಲಿತವನು ಅಲ್ಲ ನಿಮ್ಮಂತೆ ಹಳ್ಳಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ ನಿಮ್ಮಂತೆ ಕಬಡ್ಡಿ ಆಡಿ ಎಮ್ಮೆ ಕಾಯುತ್ತಾ ಬೆಳೆದಿದ್ದೇನೆ. ನನ್ನ ಸ್ನೇಹಿತ ಟ್ರ್ಯಾಕ್ಟರ್  ಓಡಿಸಲು ಕಳಿಸುತ್ತೇನೆ ಅಂತಾನೆ.  ಈ ವರ್ಷ ಸವದಿಯನ್ನು ಟ್ರ್ಯಾಕ್ಟರ್ ಓಡಿಸಲು ಕಳಿಸುತ್ತೇವೆ ಅಂತಾನೆ. ನಾನು ರೈತನ ಹೊಟ್ಟೆಯಲ್ಲಿ ಹುಟ್ಟಿದ್ದೇನೆ ಎತ್ತನ್ನೂ ಓಡಿಸಿದ್ದೇನೆ ಟ್ರ್ಯಾಕ್ಟರ್ ಅನ್ನೂ ಓಡಿಸುತ್ತೇನೆ. ನನಗೆ ಅನ್ಯಾಯ ಮಾಡಲು ಬಂದವರಿಗೆ ತಕ್ಕ ಉತ್ತರ ಕೊಡುತ್ತೇಣೆ ನನ್ನ ಕ್ಷೇತ್ರದ ಜನತೆ ನನಗೆ ಆ ಶಕ್ತಿ ನಿಡಿದ್ದಾರೆ. ನನ್ನ ಕ್ಷೇತ್ರದ ಜನರ ರೈತರ ಸ್ವಾಭಿಮಾನಕ್ಕೆ ಧಕ್ಕೆ ಆಗಲು ಬಿಡಲ್ಲ ಎಂದರು.

ಇತ್ತೀಚೆಗೆ ಅಥಣಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಶಾಸಕ ರಮೇಶ್ ಜಾರಕಿಹೊಳಿ, ಮುಂದಿನ ಚುನಾವಣೆಯಲ್ಲಿ ಸವದಿಯನ್ನು ಸೋಲಿಸಿ ಮತ್ತೆ ಟ್ರ್ಯಾಕ್ಟರ್ ಓಡಿಸಲು ಕಳುಹಿಸುತ್ತೇವೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

Key words: farmer’s son,  tractor, MLA, Lakshman Savadi