Sunday, August 9, 2026

BDA Apartments

Home Front Page ಸಿಎಂ ಆದ ಬೆನ್ನಲ್ಲೇ ವಿಜಯ್ ಖಡಕ್ ನಿರ್ಧಾರ: 717 ಮದ್ಯದಂಗಡಿಗಳ ಮುಚ್ಚಲು ಆದೇಶ

ಸಿಎಂ ಆದ ಬೆನ್ನಲ್ಲೇ ವಿಜಯ್ ಖಡಕ್ ನಿರ್ಧಾರ: 717 ಮದ್ಯದಂಗಡಿಗಳ ಮುಚ್ಚಲು ಆದೇಶ

ಚೆನ್ನೈ,ಮೇ,12,2026 (www.justkannada.in): ತಮಿಳುನಾಡು ಮುಖ್ಯಮಂತ್ರಿಯಾಗಿ   ನಟ ರಾಜಕೀಯ ನಾಯಕ ದಳಪತಿ ವಿಜಯ್​ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಖಡಕ್ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು  ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಬಳಿ ಇರುವ ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗಿನ 717 ಸರ್ಕಾರಿ ಸ್ವಾಮ್ಯದ (TASMAC) ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಎರಡು ವಾರಗಳಲ್ಲಿ ಮುಚ್ಚುವಂತೆ  ತಮಿಳುನಾಡು ಸಿಎಂ ವಿಜಯ್ ಆದೇಶ  ಹೊರಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯಾದ್ಯಂತ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ “ಸಿಂಗ ಪೆಣ್ ಸಿರಪ್ಪು ಮಾದಕ ದ್ರವ್ಯ ವಿರೋಧಿ ಪಡೆ” ಸ್ಥಾಪಿಸಲು ನಿರ್ಣಾಯಕ ನಿರ್ದೇಶನವನ್ನು ಮೇ 11 ರಂದು ಹೊರಡಿಸಿದ್ದರು. ಈ ಘಟಕವು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ದೂರುಗಳ ಮೇಲೆ ತ್ವರಿತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಸಿಎಂ ವಿಜಯ್ ತಿಳಿಸಿದ್ದಾರೆ.

Key words: Tamilnadu CM, Vijay Order, close, 717 liquor shops