Tuesday, September 22, 2026

BDA Apartments

ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್ BDA JK_Adv BDA Adv
Home Front Page ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್

ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್

ಚೆನ್ನೈ,ಮೇ,8,2026 (www.justkannada.in): ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆದ್ದರೂ ಬಹುಮತ ಸಾಬೀತಿಗೆ  ಬೇಕಾದಷ್ಟು ಶಾಸಕರ ಸಂಖ್ಯೆ ಇಲ್ಲದ ಕಾರಣ ಸರ್ಕಾರ ರಚನೆಗೆ ಹೆಣಗಾಡುತ್ತಿದ್ದ ವಿಜಯ ನೇತೃತ್ವ ಟಿವಿಕೆಗೆ ಇದೀಗ ಕಾಂಗ್ರೆಸ್ ಜೊತೆಗೆ ಇತರೆ ಪಕ್ಷಗಳು ಕೈಜೋಡಿಸಿವೆ.

ಹೌದು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸುವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಟಿವಿಕೆಗೆ 120 ಸ್ಥಾನಗಳ ಬೆಂಬಲ ಸಿಕ್ಕಿದ್ದು ಈ ಸಂಬಂಧ ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ತನ್ನ 5 ಶಾಸಕರೊಂದಿಗೆ ಬೆಂಬಲವನ್ನು ನೀಡಿದೆ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ ಮತ್ತು ಸಿಪಿಐ(ಎಂ) ಸಹ ಇಂದಿನ ಸಭೆಗಳ ನಂತರ ಟಿವಿಕೆಯನ್ನು ಬೆಂಬಲಿಸಿವೆ. ಇಬ್ಬರು ಶಾಸಕರನ್ನು ಹೊಂದಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಕೂಡ ವಿಜಯ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿದೆ.

ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲದೊಂದಿಗೆ ವಿಜಯ್ ಅವರು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

Key words: Tamilnadu, TVK , 121 MLAs, Support, Vijay, Governor