Sunday, September 20, 2026

BDA Apartments

ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ ಹಿಂಸಾಚಾರ: ನಾಲ್ವರು ಕಾರ್ಯಕ...
Home Crime ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ

ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ

ಕೋಲ್ಕತ್ತಾ,ಮೇ,6,2026 (www.justkannada.in):  ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರ ಬಂದ ಬಳಿಕವೂ ಸಹ ಹಿಂಸಾಚಾರ ನಿಂತಿಲ್ಲ. ಪ. ಬಂಗಾಳ ರಾಜ್ಯದ ವಿವಿಧೆಡೆ ನಡೆದ ಭೀಕರ ಸಂಘರ್ಷಗಳಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ವರು ರಾಜಕೀಯ ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಸುಮಾರು 12ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಪು ಘರ್ಷಣೆ, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ದಾಳಿ ಪ್ರಕರಣಗಳು ನಡೆದಿವೆ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ತಡರಾತ್ರಿ ನಡೆದ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತ ಮಧು ಎಂಬುವವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎನ್ನಲಾಗಿದೆ.  ಈ ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಕಿಡಿಕಾರಿದ್ದಾರೆ.

ಇತ್ತ  ವೀರಭೂಮಿಯ ನ್ಯೂಟೌನ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಎಂಬುವವರನ್ನು ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರತಿಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ನಿನ್ನೆಯಷ್ಟೇ ಟಿಎಂಸಿ ನಾಯಕರೊಬ್ಬರ ಕಚೇರಿಯನ್ನ ಧ್ವಂಸ ಮಾಡಲಾಗಿತ್ತು.

Key words: Violence, West Bengal, after, election, activists, killed